ಯಮಕನಮರಡಿ: ಮಿಶ್ರ ತಳಿ ದನಗಳ ಹಾಲು ಕರೆಯುವ ಸ್ಪರ್ಧೆಯನ್ನು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹುಕ್ಕೇರಿ, ಗ್ರಾಮ ಪಂಚಾಯಿತಿ ನಾಗನೂರು ಕೆಡಿ, ಹಾಲು ಉತ್ಪಾದಕರ ಸಹಕಾರಿ ಸಂಘ (ಕೆ ಎಂ ಎಫ್) ನಾಗನೂರು ಕೆ ಎಮ್ ಮತ್ತು ಶ್ರೀ ಕಾಳಭೈರವ ಹಾಲು ಉತ್ಪಾದಕರ ಸಂಘ ನಾಗನೂರು ಕೆ ಎಂ ಇವರ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲೂಕಿನ ನಾಗನೂರು ಕೆ ಎಂ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಏರ್ಪಡಿಸಲಾಗಿತ್ತು.
30ಕ್ಕೂ ಹೆಚ್ಚು ಹಸುಗಳೊಂದಿಗೆ ರೈತರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಹಾಗೆ ಸ್ಪರ್ಧೆಯಲ್ಲಿ ದನಗಳೊಂದಿಗೆ ಪಾಲ್ಗೊಂಡ ರೈತರಿಗೆ ಸಮಾಧಾನಿಕ ಬಹುಮಾನ ನೀಡಲಾಯಿತು.
ಪಶು ವೈದ್ಯಾಧಿಕಾರಿ ಡಾ. ಎಸ್. ಭೀ ಮೋಕಾಸಿ ಮಾತನಾಡಿ ಈಗಿನ ಯುವಕರು ಕೇವಲ ನೌಕರಿ ಮಾಡಲು ಅಲ್ಲಿ ಇಲ್ಲಿ ತಿರುಗಾಡುತ್ತಾರೆ ತಮ್ಮ ಸ್ವ ಗ್ರಾಮದಲ್ಲಿ ಹೈನುಗಾರಿಕೆ ಮಾಡಲು ಮುಂದಾಗಬೇಕು ಎಂದರು. ರೈತರಿಗೆ ಹೈನುಗಾರಿಕೆ ವರದಾನವಾಗಿದ್ದು ಈ ವೃತ್ತಿಯಲ್ಲಿ ಆಸಕ್ತಿ ಮತ್ತು ಶ್ರದ್ಧೆಯಿಂದ ತೊಡಗಿಸಿಕೊಂಡಂದರೆ ಆರ್ಥಿಕವಾಗಿ ಸಬಲರಾಗಲು ಅವಕಾಶವಿದೆ ಎಂದರು.
ಹುಕ್ಕೇರಿ ತಾಲೂಕ ಪಶು ಮುಖ್ಯ ವೈಜ್ಞಾಧಿಕಾರಿ ರಮೇಶ್ ಕದಮ್, ಅನ್ನಾಸಾಹೇಬ್ ಬೆನವಾಡಿ ಅಧ್ಯಕ್ಷರು ಕೆ ಎಂ ಎಫ್ ನಾಗನೂರು ಕೆ ಎಂ, ಈಶ್ವರ್ ಬೆನವಾಡಿ ಅಧ್ಯಕ್ಷರು ಕಾಲಭೈರವ ಹಾಲು ಉತ್ಪಾದಕರ ಸಹಕಾರಿ ಸಂಘ, ಡಾ ಮಲ್ಲಪ್ಪ ತಳವಾರ್, ಡಾ ಮಹಾವೀರ್ ಇಮಗೌಡನವರ, ಡಾ ರಾಜು ಮೇತ್ರಿ, ಡಾ ಪಲ್ಲವಿ, ಶ್ರೀ ರವಿ ಮಾಯನ್ನವರ, ಶ್ರೀ ಭರತ್ ಶೆಂಡಗೆ, ಭೈರಪ್ಪ ಅಗಸರ ಗೋಕುಲ್ ಸಂಘ ಕಾರ್ಯದರ್ಶಿ, ಸುಖದೇವ್ ದೇಸಾಯಿ ಕೆ ಎಮ್ ಫ್ ಸಂಘದ ಕಾರ್ಯದರ್ಶಿ… ಹಾಗೂ ರೈತರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್