ಮೈಸೂರು: ಟೀಂ ಮೈಸೂರು ತಂಡದಿಂದ ಇಂದು ಹೈದರ್ ಅಲಿ ರಸ್ತೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಇತ್ತೀಚಿಗೆ 45ಕ್ಕೂ ಹೆಚ್ಚು ಮರಗಳ ಹನನ ಮಾಡಿರುವ ಕೃತ್ಯವನ್ನು ಖಂಡಿಸಿ ಪ್ರತಿಭಟಿಸಲಾಯಿತು.
ಈ ಸಂದರ್ಭದಲ್ಲಿ ತಂಡದ ಮನೋಹರ್ ರವರು ಮರವು ತನ್ನನ್ನು ಕಡಿದಾಗ ವೇದಿಸುತ್ತಿರುವ ಹಾಗೂ ಇದ್ದಕ್ಕೆ ಕಾರಣರಾದ ಕಾರ್ಯಾಂಗ ಹಾಗೂ ಶಾಸಕಾಂಗವನ್ನು ತಮ್ಮ ಕೈ ಕುಂಚದ ಮುಖಾಂತರ ಬಿಡಿಸಿದ್ದರು.
ನಂತರ ತಂಡವು ಮರ ಗಿಡಗಳ ರಕ್ಷಣೆ ನಮೆಲ್ಲರ ಹೊಣೆ, ಹಸಿರೇ ಉಸಿರು, ಮನೆಗೊಂದು ಮರ ಊರಿಗೊಂದು ವನ ಘೋಷಣೆಗಳನ್ನು ಕೂಗಿ ನಂತರ ಮರಗಳ ಕಡಿತಕ್ಕೆ ಕಾರಣರಾದ ಅಧಿಕಾರಿಗಳಿಗೆ ಧಿಕ್ಕಾರ ಕೂಗಲಾಯಿತು. ತಂಡದ ಗೋಕುಲ್ ಗೋವರ್ಧನ್ ಮಾತನಾಡಿ, ಪರಿಸರ ಪ್ರೇಮಿಗಳು ಅಭಿವೃದ್ಧಿಯ ವಿರೋಧಿಗಳಲ್ಲ, ಅಭಿವೃದ್ಧಿ ಪರಿಸರ ಸಂರಕ್ಷಣೆಯೊಂದಿಗೆ ಮಾಡಿ ಎನ್ನುವುದು ನಮ್ಮ ಆಗ್ರಹ, ಇಲ್ಲಿ ರಸ್ತೆ ಅಗಲೀಕರಣ ಮರಗಳನ್ನು ಉಳಿಸಿಕೊಂಡು ಮಾಡಬಹುದಿತ್ತು ಆದರೆ ನಿಮಗೆ ಪರಿಸರದ ಬಗ್ಗೆ ಕಾಳಜಿ ಇಲ್ಲ, ಇನ್ನು ಮೈಸೂರು ನಗರದಲ್ಲಿ ಅನೇಕ ರಸ್ತೆಗಳು ಅಗಲೀಕರಣವಾಗಬೇಕಿದೆ ಆದರೆ ಅಧಿಕಾರಿಗಳು ಅವುಗಳನ್ನು ಮಾಡುವುದಿಲ್ಲ, ಗೋಪಾಲಗೌಡ ಆಸ್ಪತೆಯಿಂದ ಹಳೆ ಹಾಲಿನ ಡೈರಿವರಗೆ ರಸ್ತೆ ಮಾಡಿಲ್ಲಾ, ಫೈವ್ ಲೈಟ್ ಸರ್ಕಲ್ ನಿಂದ ಸಬ್ ಅರ್ಬನ್ ಬಸ್ ನಿಲ್ದಾಣ ಕಡೆ ರಸ್ತೆ ಮಾಡಿಲ್ಲ, ಇರ್ವಿನ್ ರಸ್ತೆಯಲ್ಲಿ ಇನ್ನು ಒಂದು ಕಟ್ಟಡ ಹಾಗೆ ಇದೆ ಅದನ್ನು ತೆಗೆಸಿಲ್ಲ, ಯಾಕೆ ಪ್ರಭಾವಿಗಳು ಇದ್ದಾರೆ, ಪ್ರಭಾವ ಬೀರುತ್ತಾರೆ ಇಲ್ಲಾ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂದು, ಅಲ್ಲಿ ನಿಮ್ಮ ಕರ್ತವ್ಯ ಪ್ರಜ್ಞೆ ತೋರಿಸಿ ಆದರೆ ಇಲ್ಲಿ ಇದ್ದ ಮರಗಳು, ಮರಗಳ ಮೇಲೆ ಇದ್ದ ಪಕ್ಷಿಗಳು, ಹುಳ, ಸಣ್ಣ ಸಣ್ಣ ಜೀವ ಜಂತುಗಳು ತಮ್ಮ ಪ್ರಾಣರಕ್ಷಣೆ ಕೇಳಿವುದಿಲ್ಲ ಹಾಗೂ ಪ್ರಭಾವ ಬೀರಲು ಸಾಧ್ಯವಿಲ್ಲ. ಆದ್ದರಿಂದ ಇವುಗಳ ಮೇಲೆ ನಿಮ್ಮ ಗದಪ್ರಹಾರ ಎಂಥ ನ್ಯಾಯ ಅಧಿಕಾರಿಗಳೇ ಜನಪ್ರತಿನಿಧಿಗಳೇ? ಮುಂದಾದರೂ ಅಧಿಕಾರಿಗಳು ಈ ಪರಿಸರ ಸಂರಕ್ಷಸಿ ಅಭಿವೃದ್ಧಿ ಮಾಡಿ ಎಂದು ಅಗ್ರಹಿಸಿದರು.
ಪ್ರತಿಭಟನೆಗೆ ಆಗಮಿಸಿದ್ದ ಆದಿತ್ಯ ಆಸ್ಪತ್ರೆಯ ಡಾ. ಚಂದ್ರಶೇಖರ್ ಮಾತನಾಡಿ ಈ ರೀತಿಯಲ್ಲಿ ಮರಗಳ ಮರಣಹೋಮ ಮಾಡಿರುವುದು ಸರಿಯಲ್ಲಾ ತಂತ್ರಜ್ಞಾನ ಬಳಿಸಿ ಅವುಗಳನ್ನ ಸಂರಕ್ಷಸಿಬಹುದಿತ್ತು ಆದರೆ ಅಧಿಕಾರಿಗಳು ಯಾವುದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.
ಟೀಂ ಮೈಸೂರಿನ ಕಿರಣ್ ಜೈರಾಮ್ ಗೌಡ ರವರು ಮಾತನಾಡಿ ನಮ್ಮ ತಂಡ ಮೈಸೂರು ನಗರದಲ್ಲಿ ಕಳೆದ 11 ವರ್ಷಗಳಿಂದ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುತ್ತಾ ಬಂದಿದ್ದೇವೆ, ಬೇಸಿಗೆಯ ಸಂದರ್ಭದಲ್ಲಿ ದಾನಿಗಳು ನಮ್ಮ ತಂಡದ ಸ್ನೇಹಿತರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವಕ್ಕೆ ನೀರಿನ ಟ್ಯಾಂಕರ್ಗೆ ತಗಲುವ ವೆಚ್ಚವನ್ನು ಪಡೆದು ನಾವು ಗಿಡಗಳಿಗೆ ಬೇಸಿಗೆ ಸಂದರ್ಭದಲ್ಲಿ ನೀರು ಹಾಕಿ ರಕ್ಷಿಸುತ್ತೇವೆ, ಆದರೆ ಅಧಿಕಾರಿಗಳು ಈ ರೀತಿ ಮರಗಳ ಹನನ ಮಾಡಿದರೆ ನಾವು ಯಾವ ಭರವಸೆಯಲ್ಲಿ ಮುಂದುವರಿಸುವುದು ಎಂದು ಪ್ರಶ್ನಿಸಿದರು.
ಈ ಪ್ರತಿಭಟನೆಯಲ್ಲಿ ಟೀಂ ಮೈಸೂರಿನ ಗೋಕುಲ್ ಗೋವರ್ಧನ್, ಕಿರಣ್ ಜೈರಾಮ್ ಗೌಡ, ಅನಿಲ್ ಜೈನ್ , ಹಿರಿಯಣ್ಣ, ರಾಮ್ ಪ್ರಸಾದ್, ಮುರಳಿ, ಮನೋಹರ್, ವಸಂತ್ ಕುಮಾರ್, ಬಸವರಾಜು, ಆನಂದ್, ನವೀನ್, ಹೇಮಂತ್, ಬಾಲಕೃಷ್ಣ, ಸುನೀಲ್, ಮನೋಜ್, ಗೋವಿತ್ ಕಿರಣ್, ಮೂರ್ತಿ, ಮಂಜು ಹುಣಸೂರು, ಹರೀಶ್ ಇಟ್ಟಿಗೆಗೂಡು, ಧರ್ಮೇಂದ್ರ, ತಿಲಕ್, ಸ್ವರೂಪ್, ಅಭಿಷೇಕ್, ತ್ರಿಮೂರ್ತಿ, ಶ್ರೀಮತಿ ಸಹನಾ, ಕುಮಾರಿ ಸುಕೃತ, ಕುಮಾರಿ ಕಲ್ಯಾಣಿ, ಕುಮಾರಿ ವರ್ಷಿಣಿ, ಆದಿತ್ಯ ಆಸ್ಪತ್ರೆಯ ಡಾ. ಚಂದ್ರಶೇಖರ್, ಸಾಮಾಜಿಕ ಕಾರ್ಯಕರ್ತ ಸಿಂದುವಳ್ಳಿ ಅಹ್ಮದ್ ಹಾಗೂ ಇನ್ನು ಅನೇಕ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.