Live Stream

[ytplayer id=’22727′]

| Latest Version 8.0.1 |

Local NewsState News

ರೇಡಿಯೋ ಗ್ರಾಮೀಣ ಜನರ ಜೀವನಾಡಿ; ಆರ್. ಜೆ. ಚೇತನ

ರೇಡಿಯೋ ಗ್ರಾಮೀಣ ಜನರ ಜೀವನಾಡಿ; ಆರ್. ಜೆ. ಚೇತನ

ಬಾನುಲಿ ಕೇಂದ್ರಕ್ಕೆ ಬಿ.ಈಡ್ ಪ್ರಶಿಕ್ಷಣಾರ್ಥಿಗಳ ಭೇಟಿ

ಹುಕ್ಕೇರಿ: ರೇಡಿಯೋ ಪತ್ರಿಕೆಯ ನಂತರದ ಮಾಧ್ಯಮವಾಗಿ ಬೆಳೆದು ಬಂದು ,ತನ್ನದೇ ಆದ ಐತಿಹಾಸಿಕ ಮಹತ್ವವನ್ನ ಹೊಂದಿದೆ. ಒಂದು ಸಮಯದಲ್ಲಿ ಮನೆಯಲ್ಲಿ ಯಾರೂ ಸಮಯವನ್ನ ಗಡಿಯಾರದಲ್ಲಿ ನೋಡುತ್ತಿರಲಿಲ್ಲ ಯಾಕೆಂದರೆ, ರೇಡಿಯೋ ಕಾರ್ಯಕ್ರಮದ ಪ್ರಸ್ತುತಿ ಮೂಲಕ ಸಮಯದ ಅರಿವು ಜನರಿಗೆ ಆಗುತ್ತಿತ್ತು. ಅಷ್ಟರ ಮಟ್ಟಿಗೆ ರೇಡಿಯೋ ನಮ್ಮೆಲ್ಲರ ಜೀವನದ ಭಾಗವಾಗಿತ್ತು. ಆದರೆ, ಮುಂದೆ ವಿವಿಧ ಮಾಧ್ಯಮಗಳ ಸ್ಪರ್ಧೆಯಲ್ಲಿ ರೇಡಿಯೋ ಹಿಂದುಳಿದಂತೆ ಕಂಡರೂ ಅದು ಇನ್ನೂ ತನ್ನ ಅಸ್ಥಿತ್ವವನ್ನ ಉಳಿಸಿಕೊಂಡು ಬಂದಿದೆ. ಇವತ್ತಿಗೂ ಬಾನುಲಿ ಕೇಂದ್ರಗಳು ಗ್ರಾಮೀಣ ಭಾಗದ ಜೀವನಾಡಿಯಾಗಿವೆ ಎಂದು ಆರ್.ಜೆ. ಚೇತನ್ ಅಭಿಪ್ರಾಯಪಟ್ಟರು.

ತಾಲೂಕಿನ ಹಿಡಕಲ್ ಡ್ಯಾಮ್ ನ ಮಹಿಳಾ ಕಲ್ಯಾಣ ಸಂಸ್ಥೆಯ ‘ಸ್ವಧಾರ’ ವಸತಿ ಗೃಹದಲ್ಲಿ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯ ಬೆಳಗಾವಿಯ ಪ್ರಶಿಕ್ಷಣಾರ್ಥಿಗಳಿಗೆ ಮೂರು ದಿನಗಳ ‘ಪೌರತ್ವ ತರಬೇತಿ ಶಿಬಿರದ ಅಂಗವಾಗಿ ಬಿ.ಈಡ್ ಪ್ರಶಿಕ್ಷಣಾರ್ಥಿಗಳು ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ “ಆಧುನಿಕ ಮಾಧ್ಯಮವಾಗಿ ರೇಡಿಯೋ ಹಾಗೂ ಅದರ ಉಪಯೋಗ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಮುಂದುವರೆದು ಮಾತನಾಡಿ, ಆಧುನಿಕವಾಗಿ ನಾವು ಬೆಳೆದ ಹಾಗೆ ರೇಡಿಯೋ ಸಹ ತನ್ನ ರೂಪವನ್ನ ಬದಲಿಸಿಕೊಳ್ಳುತ್ತ ಬರುತ್ತಿದೆ. ಮೊದಲು ಕೇವಲ ಫ್ರಿಕ್ವೆನ್ಸಿ ಸೆಟ್ ಮಾಡಿ ಕೇಳುವಂತಹ ರೇಡಿಯೋಗಳನ್ನ ನೋಡಬಹುದಿತ್ತು. ಕಾಲಾನಂತರ ಇಂಬಿಲ್ಟ್ ಫೋನ್ ನಲ್ಲಿ ರೇಡಿಯೋಗಳು ಬರೋದಕ್ಕೆ ಪ್ರಾರಂಭಿಸಿದವು. ಈಗ ಅಪ್ಲಿಕೇಷನ್ ಗಳ ಮೂಲಕ ಇಂಟರ್ನೆಟ್ ರೇಡಿಯೋಗಳನ್ನು ಸಹ ನೋಡ ಬಹುದಾಗಿದೆ. ಹೀಗಾಗಿ, ರೇಡಿಯೋದ ರೂಪ ಬದಲಾದರೂ ಅದು ತನ್ನ ಅಸ್ತಿತ್ವವನ್ನು ಹಾಗೆ ಉಳಿಸಿಕೊಂಡು ಬಂದಿದೆ ಎಂದರು.

ಪ್ರಶಿಕ್ಷಣಾರ್ಥಿಗಳು ವಿವಿಧ ಜನಪದ ಹಾಗೂ ಭಾವ ಗೀತೆಗಳ ಕಾರ್ಯಕ್ರಮವನ್ನು ನೀಡಿದರು.

ಈ ಸಂದರ್ಭದಲ್ಲಿ, ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಜಯಶ್ರೀ ಕೆಂಗೇರಿ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಆರ್.ಜೆ ಚೇತನ, ನಮ್ಮೂರ ಬಾನುಲಿಯ ತ0ತ್ರಜ್ಞರಾದ ಸಿದ್ಧಗೌಡ ಹಾಗೂ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";