Live Stream

[ytplayer id=’22727′]

| Latest Version 8.0.1 |

Local NewsState News

ಮಾನವೀಯತೆ ಮೆರೆದ ರಾಯಬಾಗ ಪೊಲೀಸ್ ಅಧಿಕಾರಿ…!

ಮಾನವೀಯತೆ ಮೆರೆದ ರಾಯಬಾಗ ಪೊಲೀಸ್ ಅಧಿಕಾರಿ…!

 

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ಹೊರವಲಯದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಎರಡು ಕುಟುಂಬಗಳು ಮದ್ಯ ತೀವ್ರ ಹೊಡೆದಾಟದ ಪರಿಣಾಮ ಸಂತ್ರಸ್ತ ಕುಟುಂಬದ 5 ಜನರು ಆಸ್ಪತ್ರೆಯಲ್ಲಿ ಚಿಕಿಕ್ಷೆ ಪಡೆಯುತ್ತಿದ್ದರೆ ಆರೋಪಿ ಸ್ಥಾನದಲ್ಲಿದಲ್ಲಿರುವ ಕುಟುಂಬದ ಸದಸ್ಯರು ಸೇರೇಮನೆವಾಸ ಅನುಭವಿಸುತ್ತಿದ್ದಾರೆ. ನಡೆದ ಘಟನೆ ಕುರಿತಂತೆ ರಕ್ಷಣೆ ಒದಗಿಸಲು ಬಂದ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದ ಅಪರೂಪದ ಪ್ರಸಂಗ ನಡೆದಿದೆ

ಹಾರೂಗೇರಿ ಪೊಲೀಸ್ ಠಾಣೆಯ ಮುಖ್ಯ ಪೊಲೀಸ್ ಪೇದೆ ಅರ್ಜುನ್ ಬಾಡಗಿಯವರ ಮಾನವೀಯತೆ ಮೆರೆದ ಪ್ರಸಂಗ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ. ಆರೋಪಿ ಕರೆಪ್ಪ ಮಾಂಗ ರವರ ತೋಟದ ಮನೆಯಲ್ಲಿ ಜಾನುವಾರುಗಳು ಮೆವಿಲ್ಲದೆ ಹಸಿವಿನಿಂದ ಒದ್ದಾಡುತ್ತಿರುವಾಗ ಪೊಲೀಸ್ ಅಧಿಕಾರಿಯೇ ಗದ್ದೆಗೆ ಹೋಗಿ ಮೇವು ಮಾಡಿಕೊಂಡು ಬಂದು ಕತ್ತರಿಸಿ ಮೂಖ ಪ್ರಾಣಿಗಳಾದ ಎಮ್ಮೆಗಳು, ಆಕಳುಗಳು ಮೇಕೆಗಳ ಹಸಿವು ಮತ್ತು ದಾಹ ತನಿಸುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪೊಲೀಸ್ ಎಂದರೆ ಹೆದರಿಸುವದು, ಬೇದರಿಸುವದು, ವಕ್ರಭಾಷೆ ಇತರೆ ಮನಸುಗಳು ಬೇಡವಲ್ಲದ ಕೆಲಸ ಅಂತಾ ಮೂಗು ಮುರಿಯೋ ಜನರ ಮದ್ಯ ಮೂಗಿನ ಮೇಲೆ ಬೆರಳು ಇಟ್ಟುಕೊಂಡು ನೋಡುವಂತೆ ಮಾಡಿದ್ದಾರೆ ಈ ಆರಕ್ಷಕ ಅಧಿಕಾರಿ. ತಾವೊಬ್ಬ ಪೊಲೀಸ್ ಅಧಿಕಾರಿ ಎಂಬ ಜಂಭವಿಲ್ಲದೆ ಹತ್ತಾರು ಜಾನುವಾರಗಳ ಸೇವೆ ಸಲ್ಲಿಸಿ ಜನಮೆಚ್ಚುಗೆ ಕಾರಣವಾಗಿರುವ ಪೊಲೀಸಪ್ಪನ ಮನಸು ನಿಜಕ್ಕೂ ಮಾತೃಹೃದಯಿ ಮನಸಾಗಿದೆ

ಖಾಕಿಯೊಳಗೆ ಒಬ್ಬ ಕಾವಲುಗಾರನಿದ್ದರೂ, ಅದಕ್ಕೂ ಮಿಕ್ಕಿದ ಮಮಕಾರ ಪ್ರೀತಿ, ಖಾಳಜಿ ಮನುಷ್ಯನ ಅಂತಕರಣದಲ್ಲಿ ಮನೆಮಾಡಿದ್ದಾಗ ಮಾತ್ರ ಇಂತ ಕಾರ್ಯಮಾಡಲು ಸಾಧ್ಯ, ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲದೆ ಪ್ರತಿ ಮಾನವರ ಹೃದಯಲ್ಲಿ ಈ ಪ್ರೀತಿ ತುಂಬಲಿ, ಅರ್ಜುನ್ ಬಾಡಗಿ ಸರ್ ಇಂತಹ ಹಲವಾರು ನಿದರ್ಶನಗಳಿಗೆ ಸಾಕ್ಷಿಯಾಗಲಿ ಎಂಬುದೇ ನಮ್ಮೂರ ಧ್ವನಿ ಸುದ್ಧಿ ವಾಹಿನಿಯ ಆಶಯ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";