ವಿದ್ಯಾರ್ಥಿಗಳಿಗೆ ವೈಜ್ಞಾನಿಕ ತಳಹದಿಯ ಆಲೋಚನಗೆಳ ಮೂಲಕ ಸತ್ಯ ಮಿಥ್ಯಗಳ ಕುರಿತು ಅರಿವು ಮೂಡಿಸಬೇಕಿದೆ. ಅನಕ್ಷರತೆಯ ಕಾರಣಕ್ಕಾಗಿಯೇ ಮೌಡ್ಯಗಳನ್ನೇ ಸತ್ಯವೆಂದು ಪರಿಪಾಲಿಸಿದ ಮುಗ್ಧರನ್ನು ವಿಜ್ಞಾನದ ಶಕ್ತಿಯಿಂದ ಬದಲಿಸಿದಾದ ಮಾತ್ರ ಮೌಡ್ಯರಹಿತ ಸಮಾಜ ನಿರ್ಮಾಣ ಸಾಧ್ಯ ಎಂದು ಶಿಕ್ಷಕ ಹಾಗೂ ತರಬೇತುದಾರ ರಾಜೇಶ ಭಟ್ ಹೇಳಿದರು.
ತಾಲೂಕಿನ ಕುನ್ನಾಳ ಗ್ರಾಮದ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಎಂಶ್ರೀ ಯೋಜನೆಯ ನುರಿತ ತಜ್ಞರಿಂದ ಮಾರ್ಗದರ್ಶನ ಶೀರ್ಷಿಕೆಯಡಿ “ವಿಜ್ಞಾನ ಪ್ರದರ್ಶನ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ” ದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಇಲಕಲ್ಲ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಅಜೀಮ್ ಜಮಾದಾರ ಮಾತನಾಡಿ ವಿಜ್ಞಾನ ವಿಷಯದಲ್ಲಿ ಆಳವಾದ ಅಧ್ಯಯನದ ಮೂಲಕವೇ ಇಂದು ಜಗತ್ತು ಹಲವಾರು ಮೈಲುಗಲ್ಲುಗಳನ್ನು ಸಾಧಿಸಿರುವುದು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದರು.
ಸಂಪನ್ಮೂಲ ವ್ಯಕ್ತಿಗಳು ಇಡೀ ದಿನ ವಿಜ್ಞಾನದ ಹಲವಾರು ಕೌತುಕಗಳನ್ನು ವಿವಿಧ ಪವಾಡಗಳು ಹಾಗೂ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳು ಅರಿಯುವಂತೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸತೀಶ ಮಳಲಿ ವಹಿಸಿದ್ದರು. ಹುಲಕುಂದ ಸಮೂಹ ಸಂಪನ್ಮೂಲ ವ್ಯಕ್ತಿ ವಿ ಡಿ ದಳವಾಯಿ, ಎಸ್.ಡಿ.ಎಮ್.ಸಿ ಸದಸ್ಯರಾದ ಹಣಮಂತ ಗಾಣಿಗೇರ, ಗುರುಪಾದ ಅಳ್ಳಿಗಿಡದ, ಪ್ರವೀಣ ಹುದ್ದಾರ, ರಮೇಶ ಸಕ್ರೆಪ್ಪಗೋಳ, ಬಸವರಾಜ ಸಂಕ್ರಿ, ಸದಪ್ಪಗೌಡ ನಾಡಗೌಡ್ರ, ಮುಖ್ಯ ಶಿಕ್ಷಕ ಬಿ ಬಿ ಹಾಲೊಳ್ಳಿ, ಶಿಕ್ಷಕರಾದ ಎಸ್ ಎ ಕಳ್ಳಿ, ಕೆ ಬಿ ಮಾಳಪ್ಪನವರ, ವಿ ಆರ್ ಅಣ್ಣಿಗೇರಿ, ಸಂಗಮೇಶ ಸೊಗಲದ, ಕೃಷ್ಣಾ ಮಳಲಿ, ನಿಂಗಪ್ಪ ಗವನ್ನವರ, ಶಿಕ್ಷಕಿಯರಾದ ಭಾರತಿ ಸಿದ್ನಾಳ, ಅಣ್ಣಪೂರ್ಣ ಸಕ್ರೆಪ್ಪಗೋಳ, ಕವಿತಾ ಸಿದ್ನಾಳ, ವೀಣಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಎಪ್ ಎನ್ ಕುರಬೇಟ ಸ್ವಾಗತಿಸಿದರು, ಉಮೇಶ್ವರ ಮರಗಾಲ ನಿರೂಪಿಸಿದರು.