ಗೋಕಾಕ ಕೆ.ಎಲ್.ಇ ಮಹಾದೇವಪ್ಪಣ್ಣಾ ಮುನವಳ್ಳಿ ಶಾಲೆಯ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಗೋಕಾಕ ಉಪ ಕಾರಾಗೃಹಕ್ಕೆ ತೆರಳಿ ‘ರಕ್ಷಾ ಬಂಧನ’ ಹಬ್ಬವನ್ನಾಚರಿಸಿದರು.
ವಿಚಾರಾಧೀನ ಕೈದಿಯಾದ ಶ್ರೀ ಅಫಜಲ್ಸ್ ಖಾನ ಈ ಸಂದರ್ಭದಲ್ಲಿ ಮಾತನಾಡುತ್ತ, ಯಾವುದೇ ಕಾರಣಕ್ಕೂ ವ್ಯಕ್ತಿ ತನ್ನ ತಾಳ್ಮೆಯನ್ನು ಕಳೆದುಕೊಳ್ಳಬಾರದು, ಸಿಟ್ಟಿನ ಕೈಯಲ್ಲಿ ಬುದ್ದಿಯನ್ನು ಕೊಡಬಾರದು.ಇಲ್ಲವೆಂದರೆ ಬದುಕು ನಮಗೆ ಬಹು ದೊಡ್ಡ, ಪಾರವನ್ನು ಕಲಿಸುತ್ತದೆ ಎಂದು ಹೇಳಿದರು.
ಕೆ.ಎಲ್. ಶಾಲೆಯ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅಂದಿಂದ ಪ್ರತಿಷ್ಠಿತ ಸ್ಥಳಗಳಿಗೆ ತೆರಳದೇ ನಮ್ಮಂಥ ವಿಚಾರಾಧೀನ ಖೈದಿದಳು ಇರುವ ಈ ಕಾರಾಗೃಹಕ್ಕೆ ಆಗಮಿಸಿ, ನಮ್ಮೆಲ್ಲರ ಜತೆಗೂಡಿ ‘ರಕ್ಷಾ ಬಂಧನ’ ಹಬ್ಬವನ್ನಾಚರಿಸಿಕೊಂಡಿದ್ದಾರೆ. ನಿಜಕ್ಕೂ ಇವರ ಸಾಮಾಜಿಕ ಪ್ರೇಮ ಮೆಚ್ಚುವಂಥದ್ದು. ನಮಗೂ ಪರಿವಾರವಿದೆ, ಅಕ್ಕ-ತಂಗಿಯರು ಇದ್ದಾರೆ ಆದರೆ ವಿಧಿಯಾಟ ನಾವಿಂದು ಅವರಿಂದ ದೂರಾಗಿ ರಾಖಿಯನ್ನು ಕಟ್ಟಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದೆವು, ಆದರೆ ಕೆ.ಎಲ್.ಇ ಶಾಲೆಯ ಮಕ್ಕಳು ಇಂದಿಲ್ಲಿ ಬಂದು ನಮ್ಮ ಕೊರಗನ್ನು ದೂರ ಮಾಡಿ ನಮ್ಮಲ್ಲಿ ಭ್ರಾತೃತ್ವದ ಭಾವವನ್ನು ಇಮ್ಮಡಿಗೊಳಿಸಿದ್ದಾರೆ. ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.