Live Stream

[ytplayer id=’22727′]

| Latest Version 8.0.1 |

Local News

ರವೀಂದ್ರ ಜಿಂಡ್ರಾಳಿ ಅವರ 51ನೇ ಹುಟ್ಟುಹಬ್ಬ: ಹಿಡಕಲ್ ಡ್ಯಾಂನಲ್ಲಿ ಹಣ್ಣು-ಹಂಪಲು ವಿತರಣೆ

ರವೀಂದ್ರ ಜಿಂಡ್ರಾಳಿ ಅವರ 51ನೇ ಹುಟ್ಟುಹಬ್ಬ: ಹಿಡಕಲ್ ಡ್ಯಾಂನಲ್ಲಿ ಹಣ್ಣು-ಹಂಪಲು ವಿತರಣೆ

 

ಹುಕ್ಕೇರಿ: ಸಮಾಜ ಸೇವಕ ಹಾಗೂ ಯುವ ದುರೀಣ ರವೀಂದ್ರ ಜಿಂಡ್ರಾಳಿ ಅವರ 51ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಹಿಡಕಲ್ ಡ್ಯಾಂನಲ್ಲಿರುವ ದೂಧನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ವಿಶೇಷ ವಸತಿಯುತ ಶಾಲೆ ಮತ್ತು ಮಹಿಳಾ ಕಲ್ಯಾಣ ಸಂಸ್ಥೆಯ ಸ್ವಧಾರ ಆಶ್ರಯ ಗೃಹದಲ್ಲಿ ಹಣ್ಣು-ಹಂಪಲು ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಶ್ರೀ ಲಕ್ಷ್ಮಿ ದೇವಿ ಅರ್ಬನ್ ಸೌಹಾರ್ದ ಸಹಕಾರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷರು ಆಗಿರುವ ರವೀಂದ್ರ ಜಿಂಡ್ರಾಳಿ ಅವರ ಈ ಸಮಾಜಮುಖಿ ಕಾರ್ಯಕ್ಕೆ ಹಲವು ಗಣ್ಯರು ಸಾಕ್ಷಿಯಾದರು.

ಕಾರ್ಯಕ್ರಮದಲ್ಲಿ ರವೀಂದ್ರ ಜಿಂಡ್ರಾಳಿ ಅವರ ಆಪ್ತ ಸ್ನೇಹಿತ ಸಂತೋಷ್ ಅತ್ತಿಮರದ ಮಾತನಾಡಿ, “ಸದಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ರವಿ ಜಿಂಡ್ರಾಳಿಯಂತಹ ಸ್ನೇಹಿತರನ್ನು ಪಡೆದ ನಾವೆಲ್ಲರೂ ಪುಣ್ಯವಂತರು” ಎಂದು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ಮಹಿಳಾ ಘಟಕದ ಕಾರ್ಯದರ್ಶಿ ಜಯಶ್ರೀ ಮತ್ತಿಕೊಪ್ಪ ಮತ್ತು ಉಪನ್ಯಾಸಕ ಎ.ವೈ. ಸೋನ್ಯಾಗೋಳ ಸಹ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರವೀಂದ್ರ ಜಿಂಡ್ರಾಳಿ ಅವರ ಸುಪುತ್ರ ಸಮರ್ಥ್ ಜಿಂಡ್ರಾಳಿ ಮಾತನಾಡಿ, “ಸಾಮಾಜಿಕ ಕ್ಷೇತ್ರದಲ್ಲಿ ತಂದೆಯವರು ಮಾಡುತ್ತಿರುವ ಸೇವೆಯನ್ನು ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆನಂದ ಮಗದುಮ್ಮ, ಹುಕ್ಕೇರಿ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ದಸ್ತಗೀರ್ ಬಸ್ಸಾಪೂರೆ, ಕೈಯಮ್ ಖಾಜಿ, ಸಾವಿತ್ರಿ ಕರಿಗಾರ, ಬುದ್ಧಿಮಾಂದ್ಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕ ಬಿ.ಬಿ. ಸಂಕನ್ನವರ್ ಮತ್ತು ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಅಲ್ಲದೆ, ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನದ ಸುಗಂಧಾ ಮೋಕಾಶಿ, ಮಂದಾಕಿನಿ ಹಟ್ಟಿ, ದ್ರಾಕ್ಷಾಯಣಿ ಮಠಪತಿ, ಫಲಾನುಭವಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ: ಎ.ವೈ. ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ:
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";