ಬೆಳಗಾವಿ ಡಿ.೧೬ (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗೆ Cerebral Palsy, Muscualr Distrophy,Parkinson’s & Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ. ೧೦೦೦ ಗಳ ಪ್ರೊತ್ಸಾಹಧನಕ್ಕಾಗಿ ಮರು ಅರ್ಜಿ ಆಹ್ವಾನಿಸಲಾಗಿದೆ.
ಸದರಿ ವಿಕಲಚೇತನ ಆರೈಕೆದಾರರು ಅಗತ್ಯ ದಾಖಲಾತಿಗಳೊಂದಿಗೆ ಡಿಸೆಂಬರ್ ೨೧ ರೊಳಗಾಗಿ ಆಯಾ ತಾಲೂಕು ಪಂಚಾಯತ ಕಛೇರಿಯಲ್ಲಿರುವ ವಿವಿಧೋದ್ದೇಶ ಪುನರ್ವಸತಿ (ಎಂ.ಆರ್.ಡಬ್ಲೂö್ಯ) ಕಾರ್ಯಕರ್ತರಿಗೆ ಅರ್ಜಿ ಸಲ್ಲಿಸಲು ತಿಳಿಸಿದ್ದು, ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಹಾಗೂ ಅಂಗವಿಕಲತೆ ಶೇ.೭೫ ಕ್ಕಿಂತ ಹೆಚ್ಚಿಗೆ ಇರುವ ಅಗತ್ಯ ದಾಖಲಾತಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿರಿಗಳ ಕಛೇರಿ ದೂರವಾಣಿ. ೦೮೩೧೨೪೭೬೦೯೬೭ ಅಥವಾ ತಮ್ಮ ತಾಲೂಕಿನ ಎಂ.ಆರ್.ಡಬ್ಲೂö್ಯ ಅವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಬೆಳಗಾವಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*