ಬೆಳಗಾವಿ: ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಮಚ್ಛೆ, ಇಲ್ಲಿ ಜ.21,2025 ರಿಂದ ಜ.23 ,2025 ರ ವರೆಗೆ ಮಹಾತ್ಮ ಗಾಂಧಿ ಗ್ರಾಮಿಣ ಇಂಧನ & ಅಭಿವೃದ್ಧಿ ಸಂಸ್ಥೆ, ಬೆಂಗಳೂರು, ಜಿಲ್ಲಾ ಪಂಚಾಯತ ಬೆಳಗಾವಿ ಮತ್ತು ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರುಗಳ ಸಂಯುಕ್ತ ಆಶ್ರಯದಲ್ಲಿ 3 ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಸವದತ್ತಿ ತಾಲ್ಲೂಕಿನ ಗ್ರಾಮ ಪಂಚಾಯತಿ ಘನ ತ್ಯಾಜ್ಯ ನಿರ್ವಹನಾ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಏರ್ಪಡಿಸಲಾಯಿತು.
M G I R E D, ಬೆಂಗಳೂರು ವತಿಯಿಂದ ಉಸ್ತುವಾರಿ ಅಧಿಕಾರಿಗಳಾಗಿ, ನಾಗರಾಜ್, ಅವರು ಅಗತ್ಯ ಸಲಹೆ, ಸೂಚನೆ ಮತ್ತು ಮಾರ್ಗದರ್ಶನಗಳನ್ನು ನೀಡಿದರು. 3 ದಿನಗಳ ತರಬೇತಿ ಅವಧಿಯಲ್ಲಿ ತ್ಯಾಜ್ಯ ನಿರ್ವಹನೆಯ ಅಂಶಗಳು, ತ್ಯಾಜ್ಯ ವಿಲೇವಾರಿ ಸವಾಲುಗಳು ಮತ್ತು ಪರಿಹಾರಗಳು, ಸಂವಾಹನ ಕೌಶಲ್ಯ & ಐ. ಈ. ಸಿ. ತಂತ್ರಗಳು, ಜಿ. ಪಿ. ಎಲ್. ಎಲ್. & ಘನ ತ್ಯಾಜ್ಯ ನಿರ್ವಹನೆಯ ಸವಾಲುಗಳು & ಪರಿಹಾರಗಳು, ಸಂವಹನ ಕೌಶಲ್ಯ & ಆಯ್. ಇ . ಸಿ. ತಂತ್ರಗಳು, ಜೊತೆ. ಪಿ. ಎಲ್. ಎಫ್ & ಘನ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆಗಾರ ರ ಸಾಮಾಜಿಕ ಭದ್ರತೆ ಮತ್ತು ವಯಕ್ತಿಕ ಭದ್ರತೆ, ಮತ್ತು ವಯಕ್ತಿಕ ಸುರಕ್ಷತೆ, ನಾಯಕತ್ವ & ತಂಡದ ನಿರ್ವಹಣೆ, ಘನ ತ್ಯಾಜ್ಯ ಸಂಗ್ರಹಣೆ, ಮಾರ್ಗ ನಕ್ಷೆ, ಆದಾಯೋತ್ಪನ್ನ ಚಟುವಟಿಕೆಗಳು, ವ್ಯಾಪಾರಯೋಜನೆ, ಡಿಜಿಟಲ್ ಚಟುವಟಿಕೆಗಳು ಮತ್ತು ಇತ್ಯಾದಿ ಕುರಿತು ವಿಷಯವಾರು ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ, ಸಂಪನ್ಮೂಲ ವ್ಯೆಕ್ತಿಗಳಾಗಿ ಶ್ರೀಮತಿ ಸುರೇಖಾ ಡಿ. ಪಾಟೀಲ್ ಮತ್ತು ಎಂ. ಎಂ. ಗಡಗಲಿ ಅವರುಗಳು ತರಬೇತಿಯನ್ನು ನೀಡಿದರು.
ಈ ವೇಳೆ, M G I R E D, ಬೆಂಗಳೂರು ಉಸ್ತುವಾರಿ ಅಧಿಕಾರಿಗಳು, ನಾಗರಾಜ್, ಸಂಪನ್ಮೂಲವ್ಯಕ್ತಿಗಳಾದ ಶ್ರೀಮತಿ ಸುರೇಖಾ ಡಿ. ಪಾಟೀಲ್, ಎಂ. ಎಂ. ಗಡಗಲಿ, ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.