ಮೈಸೂರು: ಏಕಲ್ ಗ್ರಾಮೋಥಾನ್ ಫೌಂಡೇಶನ್ ಗದ್ದಿಗೆ ಸಂಸ್ಥೆಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ಏ.12 ರಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.
ಕೇಂದ್ರದಲ್ಲಿ ಹನುಮಾನ ಮೂತಿಯನ್ನು ನಿಷ್ಠೆಯಿಂದ ಆರಾಧಕರು ಪ್ರತಿಷ್ಠಾಪಿಸಿ, ಗಾಯತ್ರಿ ಮಂತ್ರ ,ಓಂಕಾರ, ವಿಜಯ್ ಮಹಾ ಮಂತ್ರ, ಸಾಮೂಹಿಕ ಹನುಮಾನ್ ಚಾಲೀಸ್ ಪಠಣೆ ಮಾಡುವ ಮೂಲಕ ಭಕ್ತಿ ಭಾವದಿಂದ ಹನುಮಾನ್ ಜಯಂತಿಯ ಕಾರ್ಯಕ್ರಮ ನಡೆಯಿತು.
ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್ ಹನುಮಂತನ ಜೀವನ ಹಾಗೂ ಆದರ್ಶದ ಬಗೆ, ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರ ಗದ್ದಿಗೆ ಇಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಜೀವನ ರೂಪಿಸಲು ಮಹಿಳಾ ಸ್ವಾವಲಂಬಿ ಕೇಂದ್ರದ ಮೂಲಕ ಟೈಲರಿಂಗ್ ತರಬೇತಿ ನೀಡಲಾಗುತಿದೆ ಹಾಗೂ ಗ್ರಾಮಿಣ ಭಾಗದಲ್ಲಿ ಕಂಪ್ಯೂಟರ್ ತರಬೇತಿ ಪಡೆಯ ಬೇಕಾದರೆ ದೂರದ ನಗರ ಭಾಗಕ್ಕೆ ಹೋಗಬೇಕು ವ್ಯವಸ್ಥೆ ಇರುವುದಿಲ್ಲ , ಆದರೆ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಕೇಂದ್ರವು ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್ ಸಾಕ್ಷರತೆಯ ತರಬೇತಿ ನೀಡುವ ಮೂಲಕ ಯುವಕ ಯುವತಿಯರಿಗೆ ಕಂಪ್ಯೂಟರ್ ಜ್ಞಾನವನು ನೀಡುತ್ತಿದೆ, ಇದರ ಜೊತೆಗೆ ರೈತರು ಈ ದೇಶದ ಬೆನ್ನೆಲುಬು ಅವರು ಈ ದೇಶದ ಆಸ್ತಿ ಅನ್ನದಾತರು, ಕೃಷಿ ಪದ್ಧತಿಯಲಿ ನಾವುಗಳು ರಾಸಾಯನಿಕತೆಯನು ಕಾಣುತ್ತಿದ್ದೇವೆ, ಆದರೆ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಬಗೆ ಗ್ರಾಮ ಗ್ರಾಮಗಳಲ್ಲಿ ರೈತರಿಗೆ ಕಾರ್ಯಾಗಾರವನ್ನು ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕಾರ್ಯಾಗಾರ, ಬಿತ್ತನೆ ಬೀಜ ರಸಗೊಬ್ಬರ ಹಾಗೂ ಮಳೆಗಾಲದ season ನಲ್ಲಿ ರೈತರಿಗೆ ಗಿಡಗಳ ವಿತರಣೆ ಇತ್ಯಾದಿ ಗ್ರಾಮೀಣ ಅಭಿವೃದ್ಧಿ ಗ್ರಾಮಗಳ ಉನ್ನತಿಗಾಗಿ ಶ್ರಮಿಸುತಿದೆ ಎಂದು ತಿಳಿಸಿದರು.
ಮೈಸೂರು ಅಂಚಲ್ ಉಪಾಧ್ಯಕ್ಷರಾದ ಕುಂಟೆ ಗೌಡರು ಹನುಮಂತನ ಸಾಹಸ ಕಾರ್ಯಗಳ ಬಗ್ಗೆ ನೆರೆದಿದ್ದ ಭಕ್ತರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ತಿಳಿಸಿದರು. ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್, ಮೈಸೂರು ಅಂಚಲ್ ಉಪಾಧ್ಯಕ್ಷರಾದ ಕುಂಟೆ ಗೌಡರು, ಕಂಪ್ಯೂಟರ್ ಶಿಕ್ಷಕಿ ಶೃತಿ, ಟೈಲರಿಂಗ್ ಶಿಕ್ಷಕಿ ಶ್ರೀಮತಿ ರಾಧಾ ಮಣಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.