ಹುಕ್ಕೇರಿ: ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್, ಯರಗಟ್ಟಿಯಲ್ಲಿ ತಮ್ಮ 38 ವರ್ಷಗಳ ಶ್ರದ್ಧಾ ಹಾಗೂ ಸೇವಾಪರ ಮನೋಭಾವನೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಎಸ್. ಎ. ಸರಿಕರ, ಹಿರಿಯ ಪ್ರಧಾನ ಗುರುಗಳು, ಅವರು ದಿನಾಂಕ 31-05-2025ರಂದು ಗೌರವಾನ್ವಿತ ಸೇವಾ ನಿವೃತ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ದಿನಾಂಕ 27-06-2025, ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶಾಲಾ ಆವರಣದಲ್ಲಿ ಭವ್ಯವಾದ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಎಸ್.ಡಿ.ಎಮ್.ಸಿ. ಸಮಿತಿ, ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗಗಳ ಸರ್ವ ಶಿಕ್ಷಕ ಬಳಗ, ಮತ್ತು ಗ್ರಾಮದ ಹಿರಿಯರ ಸಹಯೋಗದೊಂದಿಗೆ ನಡೆಯಲಿದೆ.
ದಿವ್ಯ ಸಾನಿಧ್ಯದಲ್ಲಿ:
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಹುಕ್ಕೇರಿ ಹಾಗೂ
ಶ್ರೀ ಪ.ಪೂ. ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಅಜ್ಜನವರು, ಸುಕ್ಷೇತ್ರ ಯರನಾಳ – ಕಾರ್ಯಕ್ರಮಕ್ಕೆ ಪವಿತ್ರ ಸಾನಿಧ್ಯ ನೀಡಲಿದ್ದಾರೆ.
ಅಧ್ಯಕ್ಷತೆ ವಹಿಸಲಿದ್ದಾರೆ:
ಸನ್ಮಾನ್ಯ ಶ್ರೀ ನಿಖಿಲ ಉಮೇಶ ಕತ್ತಿ, ಶಾಸಕರು, ಹುಕ್ಕೇರಿ ವಿಧಾನಸಭಾ ಕ್ಷೇತ್ರ.
ಉದ್ಘಾಟನೆ ನೆರವೇರಿಸಲಿದ್ದಾರೆ:
ಸನ್ಮಾನ್ಯ ಕುಮಾರಿ ಪ್ರಿಯಾಂಕಾ ಸ. ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಸದಸ್ಯೆ.
ಮುಖ್ಯ ಅತಿಥಿಗಳಾಗಿ:
ಸನ್ಮಾನ್ಯ ಶ್ರೀ ರಮೇಶ ವಿಶ್ವನಾಥ ಕತ್ತಿ, ಮಾಜಿ ಅಧ್ಯಕ್ಷರು, ಬಿ.ಡಿ.ಸಿ. ಬ್ಯಾಂಕ್, ಬೆಳಗಾವಿ ಹಾಗೂ ಮಾಜಿ ಸಂಸದರು – ಭಾಗವಹಿಸಲಿದ್ದಾರೆ.
ಪರಿಶಿಷ್ಟ ಅತಿಥಿಗಳು:
- ಮಾನ್ಯ ಶ್ರೀ ಆರ್.ಎಸ್. ಸೀತಾರಾಮ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ
- ಮಾನ್ಯ ಶ್ರೀ ಟಿ.ಆರ್. ಮಲ್ಲಾಡದ, ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ. ಹುಕ್ಕೇರಿ
- ಶ್ರೀಮತಿ ಪ್ರಭಾವತಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ, ಹುಕ್ಕೇರಿ
- ಶ್ರೀ ಎ.ಎಸ್. ಪದ್ಮನ್ನವರ, ಕ್ಷೇತ್ರ ಸಮನ್ವಯಾಧಿಕಾರಿ, ಹುಕ್ಕೇರಿ
- ಶ್ರೀಮತಿ ಸವಿತಾ ಹಲಕಿ, ಸಹಾಯಕ ನಿರ್ದೇಶಕಿ, ಅಕ್ಷರ ದಾಸೋಹ, ಹುಕ್ಕೇರಿ
ಈ ಸಮಾರಂಭದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಶಿಕ್ಷಣ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹುಕ್ಕೇರಿ ತಾಲೂಕಿನ ಬಿಆರ್‌ಸಿ, ಸಿಆರ್‌ಸಿ, ಮತ್ತು ಹೊಸೂರ ಕ್ಲಸ್ಟರ್‌ನ ಎಲ್ಲಾ ಶಾಲೆಗಳ ಶಿಕ್ಷಕರು, ಗಣ್ಯರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ.
ಶ್ರೀ ಎಸ್.ಎ. ಸರಿಕರರ ದೀರ್ಘಕಾಲದ ನಿಷ್ಠೆಯ ಸೇವೆಗೆ ಮಾನ್ಯರಾದ ಅತಿಥಿಗಳು ಹಾಗೂ ಸಹೋದ್ಯೋಗಿಗಳು ಪ್ರಶಂಸೆ ವ್ಯಕ್ತಪಡಿಸಿ, ಉಜ್ವಲ ನಿವೃತ್ತಿ ಜೀವನಕ್ಕಾಗಿ ಶುಭಹಾರೈಸಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲಾ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಗೌರವ ಸಲ್ಲಿಸಲು ಆಹ್ವಾನಿಸಲಾಗುತ್ತಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 95905 51177