ಮೂಡಲಗಿ: ತಾಲೂಕಿನ ಗ್ರಾಮ ಪಂಚಾಯತಿ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಇತ್ತೀಚಿಗೆ, ಜಿಲ್ಲಾ ಪಂಚಾಯತ ಸಂಪನ್ಮೂಲ ಕೇಂದ್ರ, ಮಚ್ಛೇ ಇಲ್ಲಿ ಮೂರು ದಿನಗಳ ವಸತಿಯುತ ತರಬೇತಿಯನ್ನು ಎಂ.ಜಿ.ಐ.ಆರ್.ಇ.ಡಿ,ಬೆಂಗಳೂರು, ಜಿಲ್ಲಾ ಪಂಚಾಯತ, ಬೆಳಗಾವಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯಿಂದ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೂರು ದಿನಗಳ ಪುನಃಶೇತನ ತರಬೇತಿಯನ್ನು ನೀಡಿ ಅವರು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯ ಹೆಚ್ಚಿಸುವದು, ಅಗತ್ಯ ಕೌಶಲ್ಯಗಳನ್ನು ವೃದ್ಧಿಸುವುದು, ಸಾರ್ವಜನಿಕರಿಗೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವದು ಇತ್ಯಾದಿ ಕುರಿತು ವಿವಿಧ ವಿಷಯಗಳನ್ನು ಒಳಗೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಹೇಶ ಆಡಳಿತ ಅಧೀಕ್ಷಕರು, ಎಂ.ಜಿ.ಐ.ಆರ್.ಇ.ಡಿ.ಬೆಂಗಳೂರು ಅವರು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಅಭಿಪ್ರಾಯ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ.ಸುರೇಖಾ.ಡಿ.ಪಾಟೀಲ, ಎಂ.ಎಂ.ಗಡಗಲಿ & ಸಿದ್ದಪ್ಪಾ.ಹಿತ್ತಲಮನಿ ಅವರುಗಳು ತರಬೇತಿ ನೀಡಿದರು.