ಚಿಕ್ಕೋಡಿ: ಇಲ್ಲಿನ ಶಾಲಾ ಶಿಕ್ಷಕರ ಇಲಾಖೆ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆವತಿಯಿಂದ, ಎಸ್ ಡಿ ವ್ಹಿ ಎಸ್ ಪದವಿ ಪೂರ್ವ ಕಾಲೇಜು ಸಭಾಂಗಣ ಸಂಕೇಶ್ವರದಲ್ಲಿ ಸಮಾಜಶಾಸ್ತ್ರ ವಿಷಯದ ಪುನಶ್ಚೇತನ ಕಾರ್ಯಾಗಾರ ಹಾಗೂ ನಿವೃತ್ತಿ ಹೊಂದಿದ ಉಪನ್ಯಾಸಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮರಂಭ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ವೂಜ್ಯ ಶ್ರೀ ಮೋಕ್ಷಆತ್ಮಾನಂದಜೀ ಮಹಾರಾಜ (ರಾಮಕೃಷ್ಣ ಮಿಷನ್ ಆಶ್ರಾಮ ಬೆಳಗಾವಿ) ಅವರು ಮಾತನಾಡಿ, ರೈತ ನಮಗಾಗಿ ದುಡೀತಾನೆ, ನಾವು ಆತ ದುಡಿದ ಅನ್ನ ತಿಂತೀವಿ. ನಾವು ಕೂತ ಈ ಕಟ್ಟಡ ನಿರ್ಮಿಸಿದ್ದು ಇನ್ಯಾರೋ. ನಾವು ಚನ್ನಾಗಿ ಇರಬೇಕು ಅಂತ ನಮ್ಮ ತಂದೆ ತಾಯಿಗಳು ದುಡೀತಾರೆ. ಹೀಗೆ, ನಮ್ಮ ಒಳತಿಗಾಗಿ ಪ್ರತಿಯೊಬ್ಬರೂ ಸಹ ಶ್ರಮ ಮಾಡುತ್ತಿದ್ದಾರೆ. ನಾವು ಸ್ವಾರ್ಥಿಗಳಾಗದೆಯೇ ಅವರಿಗೆ ಕೃತಜ್ಞರಾಗಿರಬೇಕು. ಹಾಗೆಯೆ, ಇನ್ನೊಬ್ಬರ ಒಳತಿಗಾಗಿ ಕಾರ್ಯ ನಿರ್ವಹಿಸವಿಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ಕಾರ್ಯಕ್ರಮದಲ್ಲಿ, ಪೂ. ಶ್ರೀ ಮೋಕ್ಷಆತ್ಮಾನಂದಜೀ ಮಹಾರಾಜ (ರಾಮಕೃಷ್ಣ ಮಿಷನ್ ಆಶ್ರಾಮ ಬೆಳಗಾವಿ), ಪಿ.ಆರ್ ಭಂಡಾರೆ (ಉಪ ನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ ಚಿಕ್ಕೋಡಿ), ವಿನಯ ಪಾಟೀಲ್ (ಆಧ್ಯಕ್ಷರು ಸ್ಥಾನಿಕ ನಿಯಂತ್ರಣ ಸಮೀತಿ ಎಸ್ ಡಿ ವ್ಹಿ ಎಸ್ ಪ.ಪೂ. ಕಾಲೇಜು ಸಂಕೇಶ್ವರ), ಎಂ.ಡಿ ಹೆಬ್ಬಿ (ಪ್ರಾಚಾರ್ಯರು, ಎಸ್ ಕೆ ವ್ಹಿ ಎಂ ಎಸ್ ಪ.ಪೂ ಕಾಲೇಜು ವಿಜಯಪುರ), ಬಿ.ಎ ಪೂಜಾರ (ಆಡಳಿತ ಅಧಿಕಾರಿಗಳು, ಎಸ್ ಡಿ ವ್ಹಿ ಎಸ್ ಸಂಸ್ಥೆ ಸಂಕೇಶ್ವರ), ಶ್ರೀಮತಿ ಎಸ್ ಯು ಯರಗಟ್ಟಿ (ಪ್ರಾಚಾರ್ಯರು, ಎಸ್ ಡಿ ವ್ಹಿ ಎಸ್ ಪ.ಪೂ ಕಾಲೇಜು ಸಂಕೇಶ್ವರ), ಡಾ.ಕೆ ಎಸ್ ಕಾಂಬಳೆ ಹಾಗೂ ಎಂ. ಎಂ ಮಗದುಮ್ (ಗೌರವ ಅಧ್ಯಕ್ಷರುಗಳು ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ), ಶ್ರೀಶೈಲ ಕೋಲಾರ (ಕಾರ್ಯದರ್ಶಿ, ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಚಿಕ್ಕೋಡಿ), ಸುರೇಶ ಮಜ್ಜಗಿ (ಖಜಾಂಜಿ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಚಿಕ್ಕೋಡಿ), ಎಲ್ಲ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.