ಬೆಳಗಾವಿ: ಇಂದಿನಿಂದ ಚಳಿಗಾಲ ಅಧಿವೇಶನ ಪ್ರಾರಂಭ ಹಿನ್ನಲೆ ಅಧಿವೇಶನ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆಗಳು ನಡೆದವು. ಬೆಳಗಾವಿಯ ಸುವರ್ಣ ಸೌಧದ ಒಳಗಡೆ ಅಧಿವೇಶನ ಸುವರ್ಣ ಸೌಧದ ಹೊರವಲಯದಲ್ಲಿ ಪ್ರತಿಭಟನೆಗಳು ನಡೆದವು.
ಮೊದಲ ದಿನ ಸುಮಾರು 11 ಪ್ರತಿಭಟನೆಗಳು ಸುವರ್ಣ ಸೌಧದ ಹತ್ತಿರ ಸುವರ್ಣ ಗಾರ್ಡನನಲ್ಲಿ ಹಾಗೂ ಕೊಂಡಸಕೊಪ್ಪ ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಯಿತು. ಕರ್ನಾಟಕ ರೈತ ಸಂಘದ ಹಸಿರು ಬ್ರಿಗೇಡ್, ಅಖಿಲ ಕರ್ನಾಟಕ ರೈತ ಸಂಘ, ಜೈನ ಸಮಾಜಕ್ಕೆ ನಿಗಮ ಮಂಡಳಿ ನೀಡುವಂತೆ KSRTC ನಿಗಮದ ಕಾರ್ಮಿಕ ಒಕ್ಕುಟ ಸೇರಿ ಒಟ್ಟು 11 ಸಂಘಟನೆಗಳಿಂದ ವಿವಿಧ ಬೇಡಿಕೆಗಳಿಗೆ ಪ್ರತಿಭಟನೆ ನಡೆಯಿತು.
ಚಳಿಗಾಲ ಅಧಿವೇಶನಕ್ಕೆ ಬಿಗಿ ಭದ್ರತೆ 7 ಎಸ್ ಪಿ, 12 ಎ ಎಸ್ ಪಿ, 43 ಡಿಎಸ್ಪಿ , 123 ಸಿಪಿಐ ಸೇರಿದಂತೆ ಒಟ್ಟು 4156 ಪೋಲಿಸ್ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. 35 KSRP, 10 ಡಿ ಆರ್ ತುಕಡಿ,10 ಡ್ರೋನ್ ಕ್ಯಾಮರಾ ಜೊತೆ 300 ಬಾಡಿ ಕ್ಯಾಮರಾಗಳ ಬಳಕೆ ಮಾಡಲಾಗಿತ್ತು.