ಹುಕ್ಕೇರಿ: ತಾಲೂಕಿನ ಮೋದಗಾ ಗ್ರಾಮದ ಸುನಿಲ್ ಅಣ್ಣಪ್ಪ ಪಾಟೀಲ ಎಂಬುವರಿಗೆ ಸೇರಿರುವ ಹಸು ಪ್ರಸವದ ವೇಳೆ ಗರ್ಭಕೋಶ ತೆರೆದುಕೊಳ್ಳದ ಕಾರಣ ಗರ್ಭಕೋಶ ಸುತ್ತಿಕೊಂಡಿದ್ದರಿಂದ ಸುಮಾರು ಎಂಟು ದಿನ ನರಳುತ್ತಿತ್ತು. ಆ ಹಸುವಿನ ಗರ್ಭಕೋಶದಲ್ಲಿ ಉರುಳಿಸುತ್ತಿರುವುದರಿಂದ ಕರುಹಾಕಲು ಸಾಧ್ಯವಾಗದ ಕಾರಣ ಗರ್ಭಕೋಶದಲ್ಲಿ ಕರು ಮರಣ ಹೊಂದಿದ್ದರಿಂದ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮಾಡಿ ಸತ್ತಕರುವವನು ಹೊರ ತೆಗೆದ ಡಾ. ಶಿವಾನಂದ್ ಸಂಸುದ್ದಿ ಮತ್ತು ಡಾ. ಸಿದ್ದಾರೂಢ ಮೂಕಾಶಿ.
ಡಾ. ಸಿದ್ದಾರೂಢ ಮೂಕಾಶಿ ಮಾತನಾಡಿ ಹಸುವಿನ ಗರ್ಭಕೋಶ ತೆರೆದ ಕಾರಣ ಗರ್ಭಕೋಶದಲ್ಲಿ ಕರು ಸಾವನ್ನಪ್ಪಿದೆ ಶಸ್ತ್ರಚಿಕಿತ್ಸೆ ಮುಖಾಂತರ ಕರುವನ್ನು ಹೊರ ತೆಗೆಯಲಾಯಿತು. ಈಗ ಹಸು ಆರೋಗ್ಯವಾಗಿದೆ.ಈ ಶಸ್ತ್ರ ಚಿಕಿತ್ಸೆಗೆ ನಮ್ಮ ಸಿಬ್ಬಂದಿಯವರು ಸಹಕರಿಸಿದರು ಎಂದರು.