ಸಂಕೇಶ್ವರ: ಸಿಪಿಐ ಶಿವಶರಣ ಅವಜಿ ಅವರ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಸಂಕೇಶ್ವರ ಠಾಣೆಯಿಂದ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಪುರಸಭೆಯ ಡಾ. ಬಿ.ಆರ್ ಅಂಬೇಡ್ಕರ ಉದ್ಯಾನವನ ದಿಂದ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಪ್ರತಿಭಟನೆ ನಡೆಸಿ,ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪೋಲಿಸ ಠಾಣೆಯ ಮುಂದೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಬಿ.ಆರ್.ಅಂಬೇಡ್ಕರ್ ಜನ ಜಾಗೃತಿ ವೇದಿಕೆಯ ಜಿಲಾ ಅಧ್ಯಕ್ಷ ದೀಲಿಪ ಹೊಸಮನಿ ಮಾತನಾಡಿ, ಠಾಣೆಗೆ ಹೊದರೆ ದಲಿತರಿಗೆ ಯಾವುದೇ ರೀತಿ ಸರಿಯಾಗಿ ಸ್ಪಂದಿಸುವುತ್ತಿಲ್ಲ, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸಿಪಿಐ ಶಿವಶರಣರ ಅವಜಿ ಅವರು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳಗಿದ್ದಾರೆ ಎಂದು ಆರೋಪಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಸಂಕೇಶ್ವರ ನ್ಯಾವಾದಿಗಳ ಸಂಘ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸಿಪಿಐ ಅವರನ್ನು ವರ್ಗಾವಣೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಎಸ್.ಪಿ.
ಅವರ ಮೂಲಕ ಎಸ್.ಪಿ ಹಾಗೂ ಐಜಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ದಲಿತ ಮುಖಂಡರಾದ ರವಿ.ಕಾಂಬಳೆ. ಕೆ.ವೆಂಕಟೇಶ, ರಾಜು ಮುತ್ತಾ,ರಾವಸಾಹೇಬ್ ಪಾಂಡ್ರೆ, ಲಕ್ಷ್ಮಣ ಹೂಲಿ, ಶ್ರೀನಿವಾಸ ವ್ಯಾಪಾರಿ, ರಾಜು ಸಾನೆ, ಅನೀಲ ಖಾತೆದಾರ, ಆಕಾಶ ನಡುಮನಿ, ಮಂಜು ಮರಡಿ, ಸೇರಿದಂತೆ ನೂರಾರು ದಲಿತ ಪರ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ್