ಘೋಡಗೇರಿ: ಗ್ರಾಮದ ಶಿವಾನಂದ ಮಠದಲ್ಲಿ ನಡೆದ ನಡೆದ ಜಾತ್ರಾ ಮಹೋತ್ಸವ ಹಾಗೂ ಪುರಾಣ ರತ್ನ ಚೆನ್ನಬಸವ ದೇವರ 33 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗುರುಮಂದಿರ ಕಟ್ಟಡ ಲೋಕಾರ್ಪಣೆಗೊಳಿಸಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿದರು.
ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಈ ಹುಟ್ಟು ಸಾವಿನ ಮಧ್ಯದ ಜೀವನದಲ್ಲಿ ಬದುಕಿರುವಷ್ಟು ದಿನಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕೆಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಸಾನ್ನಿಧ್ಯ ವಹಿಸಿದ್ದ ಮಲ್ಲಯ್ಯಾ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳಿಗೆ ಸಂಸ್ಕೃತಿ-ಸಂಸ್ಕಾರ ಕಲಿಸಿ ಸಮಾಜಕ್ಕೆ ಸ್ವಚಾರಿತ್ಯವುಳ್ಳ ನಾಗರಿಕರನ್ನು ನೀಡುವ ಕಾರ್ಯ ನಡೆಯಬೇಂದರು, ದೇವಲಾಪೂರದ ಶಿವಾನಂದ ಸರಸ್ವತಿ ಸ್ವಾಮೀಜಿ, ಕಲ್ಕೂರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪ್ರಕಾಶ ಬೆಲ್ಲದ ಹಾಗೂ ಇನ್ನಿತರರು ಹಾಜರಿದ್ದರು.