ಬೆಳಗಾವಿ: ನಗರದ ಶ್ರೀ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯ ಶಿವಬಸವ ನಗರ ಬೆಳಗಾವಿಯ ವಿದ್ಯಾರ್ಥಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷರ ವ್ಹಾಲಿಬಾಲ್ ನಲ್ಲಿ ವಿಶ್ವವಿದ್ಯಾಲಯಕ್ಕೆ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ, ಗದುಗಿನ ಜಗದ್ಗುರು ಪೂಜ್ಯಶ್ರೀ ಡಾ. ಸಿದ್ದರಾಮ ಮಹಾಸ್ವಾಮಿಗಳು ಯಡಿಯೂರು ಡಂಬಳ ಗದಗ, ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನಾಗನೂರು ರುದ್ರಾಕ್ಷಿ ಮಠ ಬೆಳಗಾವಿ, ಸಂಸ್ಥೆಯ ಕಾರ್ಯದರ್ಶಿ ಎಸ್. ಪಿ ಹಿರೇಮಠ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿದ್ದರಾಮರೆಡ್ಡಿ, ಉಪಪ್ರಾಚಾರ್ಯರಾದ ರವಿರಾಜ ಖೋತ, ಹಾಗೂ ದೈಹಿಕ ನಿರ್ದೇಶಕರಾದ ಶ್ರೀಧರ್ ನೇಮಗೌಡ ಹಾಗೂ ಎಲ್ಲ ಸಿಬ್ಬಂದಿಯವರು, ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿದರು.