ಯಮಕನಮರಡಿ: ಶಿರೂರ ಹಿಡಕಲ್ ಡ್ಯಾಂ
ಕಾಲುವೆ ನೀರಲ್ಲಿ ಕಾಲು ತೊಳೆಯಲು ಹೋದ ಬಾಲಕನೊಬ್ಬ ಚಾರಿಬಿದ್ದು ನೀರಿನ ಸೆಳೆತಕೆ ಸಿಲುಕಿ ಮೃತಪಟ್ಟಿದ್ದಾನೆ.
ಬೆಳಗಾವಿ ನಗರದ ಇಲಿಯಾಸ್ ಕಾಶಿಮಲಿ ಶೇಖ(16) ಮೃತಪಟ್ಟ ಬಾಲಕ. ಕುಟುಂಬದೊಂದಿಗೆ ವಿಹಾರಕ್ಕಾಗಿ ಮಂಗಳವಾರ ಶಿರೂರ್ ಡ್ಯಾಂಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮೃತದೇಹವು ಬುಧವಾರ ದೊರಕಿದೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.