ಹುಕ್ಕೇರಿ: ತಾಲೂಕಿನ ಕರಗುಪ್ಪಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಶ್ರೀ ಈಶ್ವರ ಲಿಂಗೇಶ್ವರ ನೂತನ ಕಟ್ಟಡದಲ್ಲಿ ಇಂದು ಶಿವಲಿಂಗವನ್ನು ಸ್ಥಾಪಿಸಿ ಅದಕ್ಕೆ ಪ್ರಾಣಪ್ರತಿಷ್ಠಾಸಲಾಯಿತು. ಕಳೆದ ಮೂರು ದಿನಗಳಿಂದ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗುತ್ತಿದ್ದು ನಿನ್ನೆ 25-03-2025ರಂದು ಸಾಯಂಕಾಲ 5:00 ಕ್ಕೆ ಶ್ರೀ ಸೀಮಿದೇವಿ ದೇವಸ್ಥಾನದಿಂದ ಕುಂಭ ಮೇಳವನ್ನು ಪ್ರಾರಂಭಿಸಿ ಊರಿನ ಬೀದಿಗಳಲ್ಲಿ ಸಾಗುತ್ತ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮುಕ್ತಾಯ ಮಾಡಲಾಯಿತು.
ಇಂದು ಬೆಳಗ್ಗೆ 6:00 ಗಂಟೆಯಿಂದ ಶಿವಲಿಂಗಕ್ಕೆ ಪ್ರಾಣಪ್ರತಿಷ್ಟಾಪನೆ ಮತ್ತು ಕಳಸಾರೋಹನ ಕಾರ್ಯವನ್ನು ಪ್ರಾರಂಭವಾಯಿತು. ಮತ್ತು ಊರಿನ ಎಲ್ಲಾ ಗಣ್ಯರು ಹಾಗೂ ಎಲ್ಲಾ ಪ್ರಜೆಗಳು ಸೇರಿ ಕಾರ್ಯವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು. ಈ ಶುಭ ಕಾರ್ಯವು ಊರಿನ ಎಲ್ಲ ದೇವರ ಪಲ್ಲಕ್ಕಿ ಉಪಸ್ಥಿತಿಯಲ್ಲಿ ನೆರವೆರಿದ್ದು ಬಹಳ ವಿಷೇಶ.
ಈ ಈಶ್ವರನ ದೇವಸ್ಥಾನಕ್ಕೆ ಹಲವಾರು ಭಕ್ತರು ತಮ್ಮ ಕೈಯಿಂದಾದಷ್ಟು ದೇಣಿಗೆ ನೀಡಿದ್ದಾರೆ ಮತ್ತು ಸುತ್ತಲಿನ ಗಣ್ಯಾತಿ ಗಣ್ಯರು ಸಾಕಷ್ಟು ದೇಣಿಗೆ ನೀಡಿದ್ದಾರೆ.