ಬೈಲಹೊಂಗಲ: ತಾಲೂಕಿನ ತಿಗಡಿ ಗ್ರಾಮದಲ್ಲಿ ಬೆಳಗಾವಿಯಲ್ಲಿ ಬೀದಿ ನಾಯಿ ಕಚ್ಚಿ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ್ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಶಿವಶಂಕರಿಗೆ ಕಳೆದ 6 ತಿಂಗಳ ಹಿಂದೆ ಬೀದಿ ನಾಯಿ ಕಚ್ಚಿತ್ತು. ಈ ವೇಳೆ ಗಾಯದ ನಂಜು ಹೆಚ್ಚಾಗಿ ಶಿವಶಂಕರ್ ಊಟ ಮತ್ತು ನೀರನ್ನು ಬಿಟ್ಟಿದ್ದ. ಮಂಗಳವಾರ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶಿವಶಂಕರ್ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಶಂಕರ್ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.