ಬೆಳಗಾವಿ: ಮಹಾಂತೇಶ ನಗರದ ಬೆಮುಲ್ ಬಳಿ ಹುಡಗಿ ವಿಚಾರಕ್ಕೆ ಗಲಾಟೆ. ಬ್ರೇಕ್ ಅಪ್ ನಂತರ ಬೇರೆ ಹುಡುಗಿ ಜೊತೆಗೆ ಮಾಜಿ ಪ್ರಿಯಕರನ ಸಲುಗೆ. ಮಾಜಿ ಪ್ರಿಯಕರನ ಹುಚ್ಚಾಟಕ್ಕೆ ಬೇಸತ್ತು ಆತನ ಮೇಲೆ ಗುಂಡಿನ ಮಳೆಗೈದ ಪ್ರೇಯಸಿ.
ಹೌದು ಸಹಚರರ ಜೊತೆಗೂಡಿ ಮಹಾಂತೇಶ ನಗರದ ಬೆಮುಲ್ ಬಳಿ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಟಿಳಕವಾಡಿಯ ಧ್ವಾರಕಾನಗರದ ಪ್ರಣೀತಕುಮಾರ್ಗೆ (31) ಗಾಯವಾಗಿದೆ. ಇಬ್ಬರು ಸಹಚರರ ಜೊತೆಗೂಡಿ ಮಾಜಿ ಪ್ರಿಯತಮೆಯಿಂದ ಗುಂಡಿನ ದಾಳಿ. ಸ್ನೇಹಿತರ ಜೊತೆಗೂಡಿ ಶೂಟೌಟ್ ಮಾಡಿ ಮಾಜಿ ಪ್ರಿಯಕರನ ಕೊಲೆಗೆ ಸ್ಕೆಚ್ ಮಾಡಲಾಗಿತ್ತು. ಗುಂಡಿನ ದಾಳಿಗೆ ಬೆಚ್ಚಿಬಿದ್ದ ಬೆಳಗಾವಿ ಜನತೆ.
ಮೆಡಿಕಲ್ ರಿಪ್ರೆಜೆಂಟೆಟಿವ್ ಆಗಿ ಕೆಲಸ ಮಾಡ್ತಿರುವ ಪ್ರಣೀತಕುಮಾರ್ ಗುಂಡಿನ ದಾಳಿಯಿಂದ ತೊಡೆ, ಮುಖದ ಭಾಗಕ್ಕೆ ಗಾಯಗಳಾಗಿವೆ. ಬೀಮ್ಸ್ನಲ್ಲಿ ಪ್ರಣೀತಕುಮಾರ್ ಚಿಕಿತ್ಸೆ ನಡೆಯುತ್ತಿದೆ. ಬೀಮ್ಸ್ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಭೇಟಿ, ಪರಿಶೀಲನೆ.
ಈ ಮೊದಲು ಮಹಾಂತೇಶ ನಗರದ ವೇದಾ ಎಂಬುವವಳನ್ನು ಪ್ರೀತಿಸುತ್ತಿದ್ದ ಪ್ರಣೀತಕುಮಾರ್ ನಾಲ್ಕು ವರ್ಷಗಳ ಹಿಂದೆಯೇ ವೇದಾ-ಪ್ರಣೀತಕುಮಾರ್ ನಡುವೆ ಬ್ರೇಕ್ ಅಪ್ ಆಗಿತ್ತು. ಬ್ರೇಕ್ ಅಪ್ ಆದ ನಂತರ ಸ್ಮೀತಾ ಎಂಬುವವಳ ಜೊತೆಗೆ ಸಲುಗೆ ಹೊಂದಿದ್ದ ಪ್ರಣೀತಕುಮಾರ್ ಮಹಾಂತೇಶ ನಗರದ ಸ್ಮೀತಾ ಮನೆಗೆ ಹೋಗಿ ಬರುತ್ತಿದ್ದ ಪ್ರಣೀತಕುಮಾರ್ ಬುಧವಾರ ರಾತ್ರಿಯೂ ಊಟಕ್ಕೆಂದು ಸ್ಮೀತಾ ಮನೆಗೆ ಹೋಗಿದ್ದ.
ಈ ವಿಷಯ ಗೊತ್ತಾಗ್ತಿದ್ದಂತೆ ಇಬ್ಬರು ಪರಿಚಿತರ ಜೊತೆಗೆ ಏಕಾಏಕಿ ಸ್ಮೀತಾ ಮನೆಗೆ ನುಗ್ಗಿರುವ ವೇದಾ ಪ್ರಣೀತಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾಳೆ. ಘಟನೆಯಲ್ಲಿ ಸ್ಮೀತಾಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಬೀಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಣೀತಕುಮಾರ ಮೇಲೆ ಎರಡು ಸುತ್ತು ಗುಂಡು ಹಾರಿಸಿ ವೇದಾ ಹಾಗೂ ಪರಿಚಿತರು ಪರಾರಿ ಆಗಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿದ ಮಹಾನಗರ ಪೊಲೀಸರು. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.