ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಕನ್ನಡ ಶಾಲೆಯಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಭೀಮಪ್ಪ ಮಲ್ಲಪ್ಪ ರುದ್ರಾಪುರಿಯವರು ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ ಬೆಳಗಾವಿ ರಾಜ್ಯ ಪ್ರಶಸ್ತಿಗೆ ನ.10ರಂದು ಆಯ್ಕೆಯಾಗಿದ್ದಾರೆ.
ಇವರು ತಮ್ಮ ಶಾಲೆಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟು ಸತತ ಪ್ರಯತ್ನದಿಂದ ಮಕ್ಕಳಿಗೂ ಹಾಗೂ ಊರಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ ಸಮಾಜಮುಖಿಯಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಶಿಕ್ಷಣ ಕ್ಷೇತ್ರದಲ್ಲಿ ಆಟ ಪಾಠದಲ್ಲಿ ಹಾಗೂ ಶಾಲೆಯ ಆವರಣವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಈ ಶಿಕ್ಷಕರ ಕಾರ್ಯಕ್ಕೆ ಗ್ರಾಮದ ಎಲ್ಲರೂ ಶ್ಲಾಘಿಸಿದ್ದರೆ, ಜೊತೆಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಸದಸ್ಯರು ಸಹ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದು ಗ್ರಾಮದ ಎಲ್ಲರಿಂದ ಪ್ರಶಂಸೆಯ ಮಾತು ಕೇಳಿ ಬರುತ್ತಿತ್ತು. ಈಗ ಈ ಸೇವೆಯನ್ನು ಕಂಡು ಶ್ರೀಯುತರಿಗೆ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ನಮ್ಮೆಲ್ಲರ ಹೆಮ್ಮೆ ಹಾಗೂ ಗೌರವ.
ಭೀಮಪ್ಪ ಮಲ್ಲಪ್ಪ ರುದ್ರಾಪುರಿಯವರಿಗೆ, ರುದ್ರಾಪುರಿ ಬ್ರದರ್ಸ್ ಹಾಗೂ ಆರ್ಮಿ ಬಾಯ್ಸ್ ಹಾಗೂ ಶೇಲಾಪುರ ಗ್ರಾಮದ ಎಲ್ಲಾ ಸಮಸ್ತ ಗ್ರಾಮಸ್ಥರಿಂದ ಹಾಗೂ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. 💐💐