Live Stream

[ytplayer id=’22727′]

| Latest Version 8.0.1 |

Local NewsState News

ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ: ಶ್ರೀ ರಾಚೋಟಿ ಮಹಾಸ್ವಾಮಿಗಳು

ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ: ಶ್ರೀ ರಾಚೋಟಿ ಮಹಾಸ್ವಾಮಿಗಳು

 

ಯಮಕನಮರಡಿ: ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಯಮಕನಮರಡಿಯ 2024-25 ನೇ ಸಾಲಿನ ಪಾರಿತೋಷಕ ವಿತರಣೆ ಹಾಗೂ ದ್ವಿತೀಯ ಪಿ.ಯು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಬಿಳ್ಕೋಡುವ ಸಮಾರಂಭ ವು ಕಾಲೇಜಿನ ಸಭಾಬವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹುಣಸಿಕೊಳ್ಳಮಠದ ಶ್ರೀ ರಾಚೋಟಿ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಮಾತನಾಡುತ್ತ ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಒಂದು ಕಾರ್ಯದಲ್ಲಿ ತೊಡಗಿದ ಮೇಲೆ ಅದರಲ್ಲಿ ಸಂಪೂರ್ಣವಾಗಿ ಪರಿಶ್ರಮ ಹಾಕಿದರೆ ಹೇಗೆ ಉತ್ತಮ ಫಲ ಸಿಗುತ್ತದೆ ಎಂಬುದಕ್ಕೆ ದೃಷ್ಟಾಂತದ ಮೂಲಕ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಶ್ರೀ.ಪಿ.ಜಿ.ಕೊಣ್ಣೂರ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಗೆ ದಾಸರಾಗಿದ್ದು ಇದರಿಂದಾಗಿ ಅವರಿಗೆ ಶಿಕ್ಷಣದಲ್ಲಿ ಆಸಕ್ತಿ ಕಡಿಮೆಯಾಗಿ ಅವರ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ. ಆದಕಾರಣ ಸಮೂಹ ಮಾದ್ಯಮಗಳನ್ನು ಅವಶ್ಯಕ್ಕೆ ತಕ್ಕಂತೆ ಮಾತ್ರ ಉಪಯೋಗಿಸಬೇಕು ಎಂದು ತಿಳಿಸಿದರು.

 

ಕಾರ್ಯಕ್ರಮದಲ್ಲಿ ಬಿ.ಬಿ ಕೊಡ್ಲಿ ಉಪನ್ಯಾಸಕರು 2024-25 ನೇ ಸಾಲಿನ ಮಹಾವಿದ್ಯಾಲಯದ ವರದಿವಾಚನ ನೀಡಿ ಕಾಲೇಜಿನ ಪ್ರಗತಿ,ಬೆಳವಣಿಗೆ ಹಾಗೂ ಶೈಕ್ಷಣಿಕ ಸಾಧನೆಯ ಕುರಿತು ವಿವರಿಸಿದರು. ಸಾಂಸ್ಕೃತಿಕ ವಿಭಾಗದ ಪಾರಿತೋಷಕ ವಿತರಣೆಯನ್ನು ಶ್ರೀಮತಿ ದೀಪಾ ತೇಲಿ ಇವರು ನಡೆಸಿಕೊಟ್ಟರೆ,ಇಕೋ ಕ್ಲಬ್ ಹಾಗೂ ಬಿ.ಐ.ಎಸ್ ಕ್ಲಬ್ ವತಿಯಿಂದ ಜರುಗಿದ ಸ್ಪರ್ಧೆಗಳಲ್ಲಿ ವಿಜೇತರಾರದವರಿಗೆ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ಶ್ರೀ.ಎ.ಎ.ಕಿವಂಡಾ ನಡೆಸಿಕೊಟ್ಟರು.

ಅದರಂತೆ ವಾರ್ಷಿಕ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ಕ್ರೀಡಾ ಸಂಯೋಜಕರಾದ ಬಿ.ಬಿ.ಕೊಡ್ಲಿ ನಡೆಸಿಕೊಟ್ಟರು.ವಿಜೇತರಿಗೆ ಬಹುಮಾನ ವಿತರಣೆ ನಗದು ವಿತರಣೆ ಹಾಗೂ ಪದಕಗಳ ವಿತರಣೆಯನ್ನು ಸಭೆಯಲ್ಲಿದ್ದ ಎಲ್ಲ ಅತಿಥಿ ಗಣ್ಯರು ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾದ ವೀರಣ್ಣ ಬಿಸಿರೊಟ್ಟಿ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಪಾರಿಸ ಮಲಾಜಿ, ಅಸ್ಲಂ ಪಕಾಲಿ, ಶಿವಕುಮಾರ ಪೋತದಾರ, ರಾಜು ಮಾರ್ಯಾಳಿ, ಭರಮಾ ದೂಪದಾಳಿ ಮತ್ತಿತರರು ಭಾಗವಹಿಸಿದ್ದರು.

ಕುಮಾರಿ ಗಂಗಮ್ಮ ಮಠಪತಿ ಉಪನ್ಯಾಸಕಿ ಪ್ರಾರ್ಥನೆ ಸಲ್ಲಿಸಿದರು.ಎಸ್.ಎ.ರಾಮನಕಟ್ಟಿ ಸ್ವಾಗತ ಕೋರಿದರು.ಎಸ್.ಆರ್.ತಬರಿ ಕಾರ್ಯಕ್ರಮ ನಿರೂಪಿದರು. ಹಾಗೂ ಶ್ರೀಮತಿ ಸುಪ್ರಿಯಾ ಮಲಗೌಡನವರ ಉಪನ್ಯಾಸಕಿ ಇವರು ವಂದಿಸಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";