ಬೆಳಗಾವಿ: ಜಿಲ್ಲೆಯ ಗೋಕಾಕನಲ್ಲಿ ನ.14 ರಂದು ಎಫ್. ವಿ. ಟಿ. ಆರ್. ಎಸ. ಬೆಂಗಳೂರು, ಇವರ ಸಂಸ್ಥೆ ಕಡೆಯಿಂದ ಯುವಕರಿಗೆ ಉಚಿತವಾಗಿ ವೆಲ್ಡಿಂಗ್ ಮತ್ತು ಮೋಟಾರ್ ವೈಂಡಿಂಗ್ ತರಬೇತಿ ನೀಡುವ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ನಂತರ ಈ ಕಾರ್ಯಕ್ರಮವನ್ನ ಉದ್ದೇಶಿಸಿ ಶ್ರೀ ಬಿ.ವೈ ಹುಡೇದ (ಪ್ರಾಚಾರ್ಯರು JGS ITI ಕಾಲೇಜು, ಮರಡಿಮಠ) ಇವರು ಮಾತನಾಡಿ, ಯುವಕರು ಸ್ವಾವಲಂಬಿಯಾಗಿ ಮತ್ತು ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬದುಕಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ, ಶ್ರೀ ಬಿ.ವೈ ಹುಡೇದ ( ಪ್ರಾಚಾರ್ಯರು JGS ITI ಕಾಲೇಜು, ಮರಡಿಮಠ, ಎಂ. ಎಸ ನಂದಗಾವಿ ಹಿರಿಯ ಶಿಕ್ಷಕರು (AGS ಪ್ರಾಥಮಿಕ ಶಾಲೆ ಮರಡಿಮಠ) ಎಫ್. ವಿ. ಟಿ. ಆರ್. ಎಸ. ಸಂಸ್ಥೆಯ ಸಿಬ್ಬಂದಿ ಬಸವರಾಜ್ ಮಣ್ಣಿಕೇರಿ, ಮಹೇಂದ್ರ ಕಂಬಾರ ತರಬೇತುದಾರರು ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.