ಹುಕ್ಕೇರಿ: ತಾಲೂಕಿನ ಹಿಡಕಲ್ ಜಲಾಶಯದ ಬಳಿ ಇರುವ ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನದಲ್ಲಿ ಏಪ್ರಿಲ್ 05, 2025 ರಂದು FVTRS ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ, ಮಹಿಳೆಯರಿಗೆ ಜೀವನ ಕೌಶಲ್ಯ ತರಬೇತಿಯ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಸುರೆಖಾ ಪಾಟೀಲ ಅವರು ಮಾತನಾಡಿ, ಸಮಾಜದಲ್ಲಿ ದುಡಿಮೆಗೆ ಇವರು ಶಕ್ತಿ ಎಂತಹದ್ದು ಎಂಬುದನ್ನು ಸವಿಸ್ತಾರವಾಗಿ ಉದಾಹರಣೆಗಳ ಸಮೇತ ಹೇಳಿದರು. ಹಾಗೆಯೆ, ಇವತ್ತಿನ ಸಮಾಜದಲ್ಲಿ ಹಣದ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ತಿಳಿಸುತ್ತ, ಆ ಹಣವನ್ನು ದುಡಿಮೆ ಮಾಡುವ ಸಾಧನ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿದರು.
ಹೆಣ್ಣುಮಕ್ಕಳು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ, ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಬೆಲೆ ಸಿಗದಂತ್ತಾಗುತ್ತದೆ. ಕಾರ್ಯಕ್ರಮದಲ್ಲಿ, ನೆರೆದಿದ್ದ ಎಲ್ಲರಿಗೂ ಆಟವನ್ನು ಸಹ ಆಡಿಸಲಾಯಿತು. ಜೊತೆಗೆ, ಉಳಿತಾಯ ಮಾಡುವುದರಿಂದ ಆಗುವ ಲಾಭಗಳಬಗ್ಗೆ, ಹಣಕಾಸು ನಿರ್ವಹಣೆ ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಯೋಜನೆಯ ಲಾಭ ಪಡೆದ ಎಲ್ಲರಿಗೂ ಪ್ರಮಾಣ ಪತ್ರವೊಂದನ್ನು ವಿತರಿಸಲಾಯಿತು.
ಈ ವೇಳೆ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಸುರೆಖಾ ಪಾಟೀಲ, FVTRS ಸಂಸ್ಥೆಯ ಬಸವರಾಜ ಮಣ್ಣಿಕೇರಿ, ಹಿಡಕಲ್ ಡ್ಯಾಮ್ ಆಶ್ರಯ ಸ್ವಧಾರ ಗೃಹದ ಮೇಲ್ವಿಚಾರಕರಾದ ದಾಕ್ಷಾಯಿಣಿ ಎಲ್ಲ ಲಾಭರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.