ಲಕ್ಷ , ಲಕ್ಷ ಜೀವ ರಾಶಿಗಳಲ್ಲಿ, ನೀನೊಂದು ಜೀವ ರಾಶಿ.
ಜೊತೆ, ಜೊತೆಯಲ್ಲಿ ಜೀವಿಸುತ್ತಿದ್ದೆ, ಮನತಣಿಸುತ್ತಿದ್ದೆ.
ಕಣ್ಮರೆಯಾಗಿ ಎಲ್ಲಿ ಮರೆಯಾದೆಯೇ ಗುಬ್ಬಚ್ಚಿ?
ಸುಂದರ ನಿಸರ್ಗದಿಂದ ನಶಿಸಿ ಹೋಗ ಬೇಡ…
ನನಗೆ ಚೆನ್ನಾಗಿ ನೆನಪಿದೆ, ಆರೇಳು ದಶಕಗಳಿಂದೆ, ಮನೆ ಬಾಗಿಲಿಗೆ ಬಂದು ಪುಟ್ಟ ಕಾಲ್ಗಳೊಡನೆ, ಪುಟ್ಟ ರೆಕ್ಕೆಗಳೊಡನೆ,
ಪುಟ್ಟ, ಪುಟ್ಟ ಕೊಕ್ಕು ಕಣ್ಗಳೊಡನೆ ಮನ ತಣಿಸುತ್ತಿದ್ದೆ.
ಹದ್ದು, ಕಾಗೆಗಳಿಗಿಂತ ನೀ ಪ್ರೀತಿ ಪಾತ್ರದ ” ಪುಟಾಣಿ ಪುಟ್ಟಕ್ಕಿ” ಯಾಗಿದ್ದೆ.
ಹೊಲ , ಗದ್ದೆ, ತೋಟಗಳಲಿ ಹಾರಾಡುತ್ತಿದ್ದೆ.
ನಿರ್ಭಯವಾಗಿ ನಮ್ಮ ಬಳಿಯೇ _ ಸುಳಿದಾಡುತ್ತಿದ್ದೆ….
ಹಸಿವು ಬಾಯಾರಿಕೆಯ ತಣಿಸಿಕೊಳ್ಳುತ್ತಿದ್ದೆ .
ನೆನಪಿದೆ ಎನಗೆ_ ನೀ ಹಸು ನೀಗಿ, ಅನಾತ ವಾಗಿ ಬಿದ್ದಿದ್ದರೆ, ಸಂಗಡಿಗರೆಲ್ಲಾ ಸೇರಿ_ ನಿನಗಾಗಿ ಪುಟ್ಟಗುಂಡಿಯ ತೆಗೆದು,ಎಲೆಗಳ ಮೇಲೆ ಮಲಗಿಸಿ, ಮಣ್ಣು ಮುಚ್ಚಿ, ಕಣ್ಣಿಗೆ ಬಿದ್ದ , ಬಿಡಿ ಹೂಗಳ ನಾಕಿ, ಸಂಸ್ಕಾರ ಮಾಡುತ್ತಿದ್ದೋ.ಅಂತಾ ಪ್ರೀತಿ ಪಾತ್ರದ ಪಕ್ಷಿ ಯಾಗಿದ್ದೇ ನೀ.
ಮಾನವನ ವಿಜ್ನಾನ, ಅತಿ ಬುದ್ಧಿವಂತಿಕೆಯೇ ನಿನ್ನ ಅವನತಿಗೆ ಕಾರಣ ವಾಯ್ತೆಂದು ಹೇಳುತ್ತಾರೆ. ಹೌದಾ?
ಕ್ಷಮಿಸಿಬಿಡು ನಮ್ಮ.
ಜಗತ್ತು ವಿಶಾಲವಾಗಿದೆ, ಎಲ್ಲೋ ಸುಂದರ ನಿಸರ್ಗದ ತಾಣದ ಪರಿಸರದಲ್ಲಿ, ನಿಮ್ಮ ಸಂತತಿಯ ಸಮೃದ್ಧಿಯಾಗಿ ವೃದ್ದಿಸಿಕೊಂಡು, ಸ್ವಚ್ಚಂದವಾಗಿ ಬದುಕಿ ನೀ ಬಾಳು…
ಎಲ್ಲೇ ಇರು_ ಚನ್ನಾಗಿರು, ಸುಖ ವಾಗಿರು.
ಇದೇ ನನ್ನ ಹಾರೈಕೆ…, ಇದೇ ನನ್ನ ಹಾರೈಕೆ ….
ಸರ್ವ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಸಮಸ್ತ ಓದುಗರಿಗೆ ಪರಿಸರ ಕೇವಲ ಮನುಷ್ಯನಿಗಾಗಿ ಅಲ್ಲ ಅನ್ನುವ ಮಾತನ್ನ ಹೇಳ್ತಾ ವಿಶ್ವ ಗುಬ್ಬಚ್ಚಿ ದಿನದ ಶುಭಾಶಯಗಳು
ಕವಿ ಮಿತ್ರ ಕುಣಿಗಲ್ ದಿವಾಕರ್