ವಿಜಯನಗರ: ಜಿಲ್ಲೆ ಕೊಟ್ಟೂರು ಪಟ್ಟಣದ ಕೆ ಎಸ್ ನಾಗರಾಜ ಗೌಡ್ರು ಮಾತನಾಡಿ, ರಾಜ್ಯಾದ್ಯಂತ ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಭಾಂದವರು ಶ್ರದ್ದೆ ಭಕ್ತಿಯಿಂದ ಅಚರಿಸುತ್ತಾರೆ.
ಈ ಬಕ್ರೀದ್ ಹಬ್ಬದಿನದಂದು ವಿಶೇಷವಾಗಿ ನಮ್ಮ ಮನೆಯಲ್ಲಿ ಕೂಡ ನಮ್ಮ ತಾತ ಮುತಾತ ಕಾಲದಿಂದಲೂ ನಮ್ಮ ಮನೆಯಲ್ಲಿ ಹಿಂದೂ ಮುಸ್ಲಿಂ ಬೇದ ಭಾವ ಅನ್ನದೇ ಭಾವೈಕ್ಯತೆಯಿಂದ ಬಕ್ರೀದ್ ಹಬ್ಬದಲ್ಲಿ ದೇವರಿಗೆ ಓದಕಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಹಬ್ಬವನ್ನು ಅಚರಿಸುತ್ತಾ ಬಂದಿದ್ದಾರೆ.
ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ನಮ್ಮ ಮನೆಯಲ್ಲಿ ನಾವು ಬಕ್ರೀದ್ ಹಬ್ಬದಿನದಂದು ಮುಬಾರಕ್ ಮಜೀದಿಯಲ್ಲಿ ಮೌಜನ್ ಸಾಬ್ ಪಾತಿಹ ಮಾಡುವ ಮಹಮದ್ ಯಾಸೀನ್ ರವರನ್ನು ನಮ್ಮ ಮನೆಗೆ ಕರೆದು ಕೊಂಡು ಬಂದು ದೇವರಿಗೆ ಓದಕಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಶನಿವಾರ ವಿಶೇಷವಾಗಿ ಬಕ್ರೀದ್ ಹಬ್ಬವನ್ನು ಅಚರಿಸಲಾಯಿತು ಎಂದು ಹೇಳಿದರು.
ವರದಿ: ಚಿಗಟೇರಿ ಜಯಪ್ಪ ವಿಜಯನಗರ