ರಿಧಿ ಶ್ವಾನದ ಅಪರೂಪದ ಸೀಮಂತ ಕಾರ್ಯಕ್ರಮದ ವಿಶೇಷ ಕ್ಷಣಗಳು
ಹಾವೇರಿ: ಜಿಲ್ಲೆಯ ಹಾನಗಲ್ ಪೋಲೀಸ್ ಠಾಣೆಯ ರಕ್ತಸೈನಿಕ ಕರಬಸಪ್ಪ ಮನೋಹರ ಗೊಂದಿ ಪೋಲಿಸ್ ಕಾನ್ಸ್ಟೇಬಲ್ ಇವರ ಮನೆಯ ಶ್ವಾನ ರಿಧಿಗೆ ಇಂದು ಸೀಮಂತ ಕಾರ್ಯಕ್ರಮ ನಡೆಯಿತು.
ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನಲ್ಲಿ ರಕ್ತ ಸೈನಿಕ ಟೋಪಿ ಅಜ್ಜನ ಮನೆಯ ಆವರಣದಲ್ಲಿ ಈ ಸೀಮಂತ ಕಾರ್ಯಕ್ರಮ ಸುಲಲಿತವಾಗಿ ಜರುಗಿತು.
ಕರಬಸಪ್ಪ ಮನೋಹರ ಗೊಂದಿ ಅವರ ರಿಧಿ (ಲಾಬರ್ ಡಾಗ) ಗರ್ಭಿಣಿಯಗಿದ್ದ ಹಿನ್ನಲೆಯಲ್ಲಿ ಸೀಮಂತವನ್ನ ಅದ್ದೂರಿಯಾಗಿ ಇಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ, ಬಮ್ಮನಹಳ್ಳಿಯ ರಕ್ತ ಸೈನಿಕ ರಂಜಿತ ಪೂಜಾರಿ ಶ್ವಾನ ತರಬೇತುದಾರರು ಹಾಗೂ ಶ್ವಾನ ಸಾಕುದಾರರು ಕುಮಾರಗೌಡ ಪಾಟೀಲ್, ಎನ್ ಎಸ್ ಪಾಟೀಲ್,ವಿಜಯ್ ಬಾಬಜಿ, ಶೋಭಾ ಪ್ರಕಾಶ್, ಮನೋಹರ ಗೊಂದಿ, ಸೋಮೇಶ್ ಗುಡ್ಡದ, ವಿಜಯ್ ತಿರಕಣ್ಣನವರ, ಪ್ರಶಾಂತ್ ಹತ್ತಿ, ಮಂಜುಳಾ ಹುಲಗೂರ ರಾಷ್ಟ್ರೀಯ ಶ್ವಾನ ಪ್ರದರ್ಶನ ತೀರ್ಪುಗಾರರು, ತರಬೇತಿ ಪಡೆದ ಶ್ವಾನಗಳಾದ ಚಾರ್ಲಿ ಮತ್ತು ಕಾಳಿ ಇವರ ಹಾಗೂ ಸಂಬಂಧಿಕರು ಸ್ನೇಹಿತರು ಉಪಸ್ಥಿತರಿದ್ದರು.