Live Stream

[ytplayer id=’22727′]

| Latest Version 8.0.1 |

Local NewsNational NewsState News

ನಮ್ಮೂರ ಬಾನುಲಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಕುರಿತು ವಿಶೇಷ ಕಾರ್ಯಕ್ರಮ

ನಮ್ಮೂರ ಬಾನುಲಿಯಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಕುರಿತು ವಿಶೇಷ ಕಾರ್ಯಕ್ರಮ

ಹುಕ್ಕೇರಿ: ತಾಲೂಕಿನ ಕರಗುಪ್ಪಿ–ಯಲ್ಲಾಪುರದ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ 90.8 ಎಫ್ ಎಂ ನಲ್ಲಿ “ಎನ್ ಪಿ ಎಸ್ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ರಿಟೈರ್ ಸ್ಮಾರ್ಟ್ ಇಂಡಿಯಾ ” ವಿಷಯದ ಕುರಿತು ಮಹತ್ವದ ವಿಶೇಷ ಸಂದರ್ಶನ ಕಾರ್ಯಕ್ರಮ ಆಯೋಜಿಸಲಾಯಿತು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ನಡೆಸಲಾದ ಈ ಸಂವಾದ ಕಾರ್ಯಕ್ರಮಕ್ಕೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿ ಎಫ್ ಆರ್ ಡಿ ಎ) ದ ಅಧಿಕಾರಿಗಳು ವಿಶಿಷ್ಟ ಅತಿಥಿಗಳಾಗಿ ಆಗಮಿಸಿದ್ದರು.

ಈ ಸಂದರ್ಶನ ಕಾರ್ಯಕ್ರಮದಲ್ಲಿ ಕುಮಾರಿ ಖುಶ್ಬು ಶುಕ್ಲ, ಸಹಾಯಕ ಮಹಾಪ್ರಬಂಧಕಿ, ಪಿ ಎಫ್ ಆರ್ ಡಿ ಎ ಹಾಗೂ ಸಮರ್ಥ ಹೆಗಡೆ, ಸಹಾಯಕ ವ್ಯವಸ್ಥಾಪಕರು, ಪಿ ಎಫ್ ಆರ್ ಡಿ ಎ ಪ್ರಮುಖ ಅತಿಥಿಗಳಾಗಿ ಪಾಲ್ಗೊಂಡು, ಎನ್ ಪಿ ಎಸ್ ನ ಉಪಯೋಗಗಳು, ಭವಿಷ್ಯದ ಭದ್ರತೆ, ಹೂಡಿಕೆ ಮಾದರಿ ಹಾಗೂ ನಾಗರಿಕರಿಗೆ ದೊರೆಯುವ ಪ್ರಯೋಜನಗಳ ಬಗ್ಗೆ ವಿವರವಾಗಿ ಮಾತನಾಡಿದರು. ನಿವೃತ್ತಿ ನಂತರದ ಆರ್ಥಿಕ ಸುರಕ್ಷತೆಯನ್ನು ಒದಗಿಸುವಲ್ಲಿ ಎನ್ ಪಿ ಎಸ್ ನಿರ್ವಹಿಸುವ ಮಹತ್ವದ ಪಾತ್ರವನ್ನು ಅವರು ನಮ್ಮೂರ ಬಾನುಲಿಯ ಶ್ರೋತುಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿವರಿಸಿದರು.

ಕಾರ್ಯಕ್ರಮದ ಸಂಧರ್ಭದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ಎಂ. ಎಸ್. ಚೌಗಲಾ ಅವರು ಉಪಸ್ಥಿತರಿದ್ದು, ಗ್ರಾಮೀಣ ಪ್ರದೇಶಗಳಲ್ಲಿರುವ ಸಾಮಾನ್ಯ ಜನರಿಗೆ ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯವಿದ್ದು, ಹಣಕಾಸಿನ ಜಾಗೃತಿ ಮೂಡಿಸಿದ್ದಕ್ಕೆ ಅತೀಥಿಗಳಿಗೆ ಧನ್ಯವಾದ ಹೇಳಿದರು.

ಇದೆ ಸಂಧರ್ಭದಲ್ಲಿ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ ಆರ್ ಜೆ ಮೀರಾ ಮತ್ತು ಆರ್ ಜೆ ಚೇತನ ಸಂಯುಕ್ತವಾಗಿ ಅತಿಥಿಗಳೊಂದಿಗೆ ಶ್ರೋತುಗಳು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳನ್ನು ಮುನ್ನಡೆಸಿ, ವಿಷಯವನ್ನು ಮತ್ತಷ್ಟು ಸಮಗ್ರಗೊಳಿಸಿದರು.

ಸ್ಥಳೀಯ ಶ್ರೋತರಿಗೆ ಸ್ಪಷ್ಟ ಮತ್ತು ಬಳಕೆಯಲ್ಲಿರಬಹುದಾದ ಮಾಹಿತಿ ತಲುಪಿಸುವ ಉದ್ದೇಶದಿಂದ ರೂಪಿಸಲಾದ ಈ ವಿಶೇಷ ಕಾರ್ಯಕ್ರಮವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";