ಹುಕ್ಕೇರಿ: ತಾಲೂಕಿನ ಪಾಶ್ಚಾಪುರ ಗ್ರಾಮದ ಕಮತಗಿಯವರ ಮನೆತನದಲ್ಲಿ ಇರುವ ಜಗನ್ಮಾತೆ ಎಂದೇ ಪ್ರಸಿದ್ಧಿ ಪಡೆದ ಶ್ರೀ ಎಲ್ಲಮ್ಮ ದೇವಿ ಜಾತ್ರೆಯು ಇತ್ತೀಚಿಗೆ ಅದ್ದೂರಿಯಾಗಿ ಜರುಗಿತು.
ಸದರಿ ಜಾತ್ರಾ ಮಹೋತ್ಸವಕ್ಕೆ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅಪ್ಪಟ ಅಭಿಮಾನಿ ಸಂದೇಶ ರಾಜಮಾನೆ ಅವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವದಲ್ಲಿ ಶ್ರೀ ದೇವಿಗೆ ಉಡಿ ತುಂಬ ಕಾರ್ಯಕ್ರಮ , ದೇವಸ್ಥಾನದಲ್ಲಿ ಹೋಮ ಹವನ ಕಾರ್ಯಕ್ರಮ ,ಹಾಗೂ ರಾತ್ರಿ ಚೌಡಕಿ ಪದಗಳು ಮತ್ತು ಮಹಾಪ್ರಸಾದ ಜರುಗಿತು.
ಜಾತ್ರೆಯ ಹಿನ್ನೆಲೆ: ಪಾಶ್ಚಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಮತಗಿಯವರ ಮನೆಗೆ ಆಗಮಿಸಿ ಶ್ರೀ ಎಲ್ಲಮ್ಮ ದೇವಿಗೆ ಶ್ರದ್ಧಾ ಭಕ್ತಿ, ವಿಶ್ವಾಸದಿಂದ ಜಪ, ತಪ ,ಪೂಜೆ ಪುರಸ್ಕಾರವನ್ನು ಮಾಡಿದ್ದರ ಪರಿಣಾಮವಾಗಿ ಅರ್ಚಕರಾದ ಮಲ್ಲಿಕಾರ್ಜುನ ಕಮತಗಿ ಅವರ ಮನೆಯಲ್ಲಿ ಶ್ರೀ ಎಲ್ಲಮ್ಮ ದೇವಿ ನೆಲೆಸಿದ್ದಾಳೆ ಎಂದು ನಂಬಿಕೆ ಇದೆ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು, ರಾಜಕೀಯ ಮುಖಂಡರುಗಳು, ಸಮಾಜ ಸೇವಕರುಗಳು ತನುಮನ ಧನದಿಂದ ಎಲ್ಲಮ್ಮ ದೇವಿಯ ಮಂದಿರವನ್ನು ನಿರ್ಮಾಣ ಮಾಡಿರುತ್ತಾರೆ.
ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶ್ರೀ ರವಿ ಕೆ ತಳವಾರ್, ಗ್ರಾಮದ ಭಕ್ತಾದಿಗಳು ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು
ವರದಿ:ಎ.ವೈ.ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ