ಯಮಕನಮರಡಿ: ಬಂಬರಗೆ ಗುಗ್ರೆನಟ್ಟಿ ಮತ್ತು ಹೊಸೂರು ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆಯನ್ನು . ಏಪ್ರಿಲ್ 21 ರಿಂದ 29/ 2026 ರಂದು ಮಾಡಲು ದೇವಸ್ತಾನ ಪಂಚ ಕಮಿಟಿ ಮತ್ತು ಗ್ರಾಮಸ್ಥರು ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಸನ್ 2000ರಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆ ನಡದಿದ್ದು, ಸುಮಾರು 25 ವರ್ಷಗಳ ಬಳಿಕ ಇದೀಗ ಜಾತ್ರೆ ಮಾಡಲು ತೀರ್ಮಾನ ಮಾಡಲು ರೂಪು ರೇಷೆ ಹಾಗೂ ಮುಂದಿನ ಕಾರ್ಯಕ್ರಮದ ಬಗ್ಗೆ ಶೀಘ್ರವೇ ಮೂರು ಗ್ರಾಮಗಳ ಪಂಚ ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಸಭೆ ನಡೆಸಿ ತೀರ್ಮಾನಿಸಲಾಗುವುದು. ಹಾಗೂ ಜಾತ್ರೆಯ ಮುಂದಿನ ಯೋಜನೆ ಉತ್ತಮವಾಗಿರಲಿ ಎಂದು ಈಗಿನಿಂದಲೇ ಕಾಮಗಾರಿ ಆರಂಭಿಸಲು ನಿರ್ಧರಿಸಲು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಮೂರೂ ಗ್ರಾಮಗಳ ಪಂಚ್ ಕಮಿಟಿಯವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.