ಯಮಕನಮರಡಿ: ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ತಮ್ಮ ಜನ್ಮ ದಿನವನ್ನ ಹಿಡಕಲ್ ಡ್ಯಾಮಿನ ಶ್ರೀ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಿಶೇಷ ವಸತಿಯುತ ಶಾಲೆಯ ಮಕ್ಕಳೊಂದಿಗೆ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡು ಬುದ್ಧಿಮಾಂಧ್ಯ ಮಕ್ಕಳಿಗೆ ಹಣ್ಣು ಹಂಪಲ ವಿತರಿಸಿ ಅನ್ನ ಪ್ರಸಾದ ಮಾಡಿದರು.
ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ, ಬುದ್ಧಿಮಾಂದ್ಯ ಮಕ್ಕಳು ದೇವರ ಸ್ವರೂಪಿಗಳು ಅವರ ಮನಸ್ಸು ಪರಿಶುದ್ಧವಾದದ್ದು, ಅವರು ಮೋಸ, ವಂಚನೆ, ಕಪಟ, ಭಾವನೆಗಳು ಇರುವುದಿಲ್ಲ. ಬುದ್ಧಿಮಾಂದ್ಯ ಮಕ್ಕಳೊಂದಿಗೆ ಜನ್ಮದಿನ ಆಚರಿಸಿಕೊಳ್ಳುವುದು ಸೌಭಾಗ್ಯ ದುಂದು ವೆಚ್ಚ ಮಾಡಿ ಐಷಾರಾಮಿ ಹೊಟೇಲಗಳಲ್ಲಿ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳದೆ ಬುದ್ದಿಮಾಂದ್ಯ ಮಕ್ಕಳೊಂದಿಗೆ ಜನ್ಮ ದಿನವನ್ನು ಆಚರಿಸಿಕೊಂಡು ಅವರಿಂದ ಸಂತಸ ಹಂಚಿಕೊಳ್ಳಬೇಕೆಂದು ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಈ ವೇಳೆಯಲ್ಲಿ ಘೋಡಗೇರಿ ಗ್ರಾ.ಪಂ ಉಪಾಧ್ಯಕ್ಷ ಶಿವಾನಂದ ಮುಗಳಿ, ಬೆಳಗಾವಿಯ ಬಿ.ಎಸ.ಎನ.ಎಲ್ ನಿರ್ದೇಶಕರಾದ ಸುರೇಶ ಕುರುಣಿ ಮಾರುತಿ ಗಾಡಿವಡ್ಡರ, ಮಲ್ಲಿಕ ಮುಜಾವರ, ಶಿವಲಿಂಗ ಮುಗಳಿ, ಅಮೀತ ಮುನ್ನೊಳ್ಳಿ, ಸಂಜು ಬಡಿಗೇರ, ಘೋಡಗೇರಿ, ಶಿವಾಪುರ, ಸಾವಳಗಿ, ಗ್ರಾಮಗಳ ಗ್ರಾಮಸ್ಥರು ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿ ವರ್ಗದವರು ಇದ್ದರು.
ಚಂದ್ರಕಲಾ ಅಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143