ಹುಣಸೂರ: ತಾಲೂಕಿನ ಗದ್ದಿಗೆಯಲ್ಲಿರುವ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಶ್ರೀ ರಾಮ ನವಮಿ ಉತ್ಸವ ನಿಮಿತ್ತ ಏಕಲ್ ಪರಿವಾರ ಸಮಾಗಮ ರಾಮ ನವಮಿ ಕಾರ್ಯಕ್ರಮ ಹಾಗೂ ಹಿರಿಯ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ, ಮೊದಲಿಗೆ ಗದ್ದಿಗೆಯ ಶ್ರೀ ಕೆಂಡಗನೇಶ್ವರ ಸ್ವಾಮಿ ದೇವಸ್ಥಾನದ ಲಕ್ಷ್ಮಣ ತೀರ್ಥ ನದಿಯಲ್ಲಿ ಗಂಗಾ ಪೂಜೆ ಸಲ್ಲಿಸಿ , ಶ್ರೀರಾಮ, ಲಕ್ಷ್ಮಣ, ಸೀತಾ ಸಹಿತ ಭಾವಚಿತ್ರ, ಭಾರತಮಾತೆ ಲಕ್ಷ್ಮಿ ಸಹಿತ ಭಾವಚಿತ್ರ ಹಾಗೂ ಪೂರ್ಣಕುಂಭದೊಂದಿಗೆ ಏಕಲ್ ಗ್ರಾಮಸ್ಥನ ಫೌಂಡೇಶನ್ ಸಂಸ್ಥೆಯ ವಿದ್ಯಾರ್ಥಿಗಳ ಶೋಭಾ ಯಾತ್ರೆ ಕಾರ್ಯಕ್ರಮವು ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರದ ವರೆಗೆ ನಡೆಯಿತು.
ಈ ಒಂದು ಶೋಭಾ ಯಾತ್ರೆಯ ಉದ್ದಕ್ಕೂ ಭಾರತ್ ಮಾತಾ ಕಿ ಜೈ, ಶ್ರೀರಾಮಚಂದ್ರ ಪ್ರಭು ಕಿ ಜೈ, ಗಂಗಾ ಮಾತ ಕಿ ಜೈ ಎಂಬ ಜೈಕಾರ ಘೋಷಣೆ ಎಲ್ಲೆಲ್ಲೂ ಮೊಳಗಿತು. ಶ್ರೀ ರಾಮ ನವಮಿ ಉತ್ಸವದ ಪ್ರಾಮುಖ್ಯತೆಯ ಬಗ್ಗೆ ಜಗದೀಶ್ ಹೆಬ್ಬಾರ್ ವಿ ಎಚ್ ಪಿ ಜಿಲ್ಲಾ ಉಪಾಧ್ಯಕ್ಷರು ಬೌದಿಕ್ ನಡೆಸಿಕೊಟ್ಟರು. ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯು ನೀಡುವ ಕೌಶಲ್ಯ ತರಬೇತಿ ಹಾಗೂ ರೈತರಿಗೆ ನೀಡುವಂತಹ ತರಬೇತಿಯ ಬಗ್ಗೆ ಏಕಲ್ ನ ಕಾರ್ಯ ಚಟುವಟಿಕೆಯ ಬಗ್ಗೆ, ತರಬೇತಿ ಪಡೆಯುವ ಲಾಭಗಳ ಬಗ್ಗೆ ಹಾಗೂ ತರಬೇತಿ ಪಡೆದಂತಹ ವಿದ್ಯಾರ್ಥಿಗಳ ಯಶೋಗಾಥೆಯ ಬಗ್ಗೆ, ಏಕಲ್ ನೀಡುತ್ತಿರುವಂತಹ ವೃತ್ತಿ ತರಬೇತಿ ಕೇಂದ್ರಗಳ ಮಾಹಿತಿ ಹಾಗೂ ತರಬೇತಿಗಳ ಮಾಹಿತಿ ಮಹಿಳಾ ಸಬಲೀಕರಣಕ್ಕೆ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಕೊಡುಗೆಯ ಬಗ್ಗೆ ಗೋವಿತ್ ಕಿರಣ್ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮೈಸೂರು ಅಂಚಲ್ ಉಪಾಧ್ಯಕ್ಷರಾದ ಕುಂಟೆ ಗೌಡರು, ಜಗದೀಶ್ ಹೆಬ್ಬಾರ್ ವಿ ಎಚ್ ಪಿ ಜಿಲ್ಲಾ ಉಪಾಧ್ಯಕ್ಷರು, ಮಹಾದೇವಪ್ಪ ವಿ ಎಚ್ ಪಿ ಕಾರ್ಯಕರ್ತರು, ಮಹೇಶ್ ವಿ ಎಚ್ ಪಿ ಧರ್ಮಪ್ರಸಾರ ಸಂಯೋಜಕ್, ಗೋವಿತ್ ಕಿರಣ್ ಏಕಲ್ ಗ್ರಾಮೋಥಾನ್ ಫೌಂಡೇಶನ್ ರಾಜ್ಯ ಸಂಯೋಜಕರು, ಶ್ರೀಮತಿ ಲತಾ STO ಏಕಲ ಆರೋಗ್ಯ ಫೌಂಡೇಶನ್, ಮಹಿಳಾ ಕಾರ್ಯಕರ್ತರಾದ ಪುಷ್ಪವತಿ ಭಾಗ್ಯಮ್ಮ ರೇಖಾ, ಏಕಲ ಅಭಿಯಾನ್ ಕಾರ್ಯಕರ್ತರಾದ ಶಂಕರ್, ಮಹಾದೇವಮ್ಮ, ಕುಮಾರ್, ಶಿಕ್ಷಕರಾದ ಶಿವಕುಮಾರ್, ಶ್ರೀಮತಿ ರಾಧಾಮಣಿ, ಶೃತಿ ಹಾಗೂ ಏಕಲ ಅಭಿಯಾನದ ಆಚಾರ್ಯರು ಸಮಿತಿಯವರು, ಆರೋಗ್ಯ ಫೌಂಡೇಶನ್ ನ ಆರೋಗ್ಯ ಸೇವೆಕಿಯರು, ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.