ಹುಕ್ಕೇರಿ: ತಾಲ್ಲೂಕಿನ ದಡ್ಡಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳು ಕೃತಾರ್ಥರಾದರು.
ಯುಗಾದಿ ಹಬ್ಬದ ನಿಮಿತ್ಯ ಹಾಗೂ ಶ್ರೀ ರಾಮಲಿಂಗೇಶ್ವರ ಜಾತ್ರೆ ನಿಮಿತ್ತ ಶನಿವಾರ ರಾತ್ರಿ ಶ್ರೀ ಕೃಷ್ಣ ಪಾರಿಜಾತ ಬೈಲಾಟ ಹಾಗೂ ಪಲ್ಲಕ್ಕಿ ಉತ್ಸವ ಜರಗಿತು ಮತ್ತು ರವಿವಾರ ಬೆಳಿಗ್ಗೆ ದೇವಸ್ಥಾನದ ಶ್ರೀ ರಾಮಲಿಂಗ ದೇವರಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ನೇರವೇರಿಸಲಾಯಿತು.
ನಿಂಗಪ್ಪ ತೆಗ್ಗಿನಾಳಿ ಮಾತನಾಡಿ, ಶ್ರೀರಾಮಲಿಂಗೇಶ್ವರ ಜಾತ್ರೆ ನಿಮಿತ್ಯ ದಡ್ಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಹಾಗೂ ಕುಸ್ತಿ ಪದ್ಯಾವಧಿ ಆಯೋಜನೆ ಮಾಡಲಾಗುತ್ತದೆ. ಮೊದಲು ಹೋಲಿಸಿದರೆ ಈಗ ಕುಸ್ತಿ ಆಡಲು ಕ್ರೀಡಾಪಟುಗಳ ಆಸಕ್ತಿ ಇಲ್ಲದಂತಾಗಿದೆ ಮೊದಲು ಪ್ರತಿ ಗ್ರಾಮಕ್ಕೆ ಒಂದು ಗರಡಿ ಮನೆ ಇರುತ್ತಿತ್ತು ಈಗ ತಾಲೂಕಿನಲ್ಲಿ ಒಂದು ಅಥವಾ ಎರಡು ಗರಡಿ ಮನೆಗಳು ಕಾಣುತ್ತವೆ. ಸರಕಾರ ಕುಸ್ತಿ ಕ್ರೀಡೆಗೆ ಪ್ರೋತ್ಸಾಹಿಸಬೇಕಾಗಿದೆ ಗರಡಿ ಮನೆ ಗ್ರಾಮ ಪಂಚಾಯಿತಿಗೆ ಒಂದು ಮಾಡಬೇಕು ಕುಸ್ತಿ ಕ್ರೀಡೆಗೆ ಪ್ರೋತ್ಸಾಹಿಸಬೇಕು ಎಂದರು.
ಸಂಜೆ 4ಕ್ಕೆ ಆರಂಭಗೊಂಡ ಜಂಗಿಕುಸ್ತಿಗೆ ಗ್ರಾಮದ ಹಿರಿಯರಿಂದ ಚಾಲನೆ ನೀಡಿದರು. ಜಿಲ್ಲೆಯ ವಿವಿಧ ಗ್ರಾಮಗಳು ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಕುಸ್ತಿ ಪೈಲ್ವಾನರು ತಮ್ಮ ಸಾಹಸ ಪ್ರದರ್ಶಿಸಿದರು.10 ವರ್ಷದ ಬಾಲಕರಿಂದ ಹಿಡಿದು ಖ್ಯಾತ ಕುಸ್ತಿ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಸಂದರ್ಭದಲ್ಲಿ ನೆರೆದ ಪ್ರೇಕ್ಷಕವರ್ಗ ಪೈಲ್ವಾನರಿಗೆ ಪ್ರೋತ್ಸಾಹಿಸುತ್ತಿರುವುದು ವಿಶೇಷವಾಗಿತ್ತು.