ಮೂಡಲಗಿ: ತಾಲೂಕಿನ ಚಿತ್ರಕಲಾ ಶಿಕ್ಷಕರ ಸಂಘ ಮೂಡಲಗಿ ಹಾಗೂ ಎಸ್ ಎಸ್ ಆರ್ ಪ್ರೌಢಶಾಲೆ ಮೂಡಲಗಿ ಅವರ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ಬಿಡಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಒಂದು ದಿನದ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಯಟ್ ಚಿಕ್ಕೋಡಿಯ ಉಪನ್ಯಾಸಕೀಯರಾದ ಶ್ರೀಮತಿ ಭಾರತಿ ಸನದಿಯವರು ಮಾತನಾಡುತ್ತಾ, ಕಾರ್ಯಗಾರವು ಚಿತ್ರಕಲಾ ಶಿಕ್ಷಕರಿಗೆ ಒಂದು ಚೈತನ್ಯದ ಚಿಲುಮೆ ಅವರು ಈ ಕಾರ್ಯಗಾರದಿಂದ ಏನಾದರೂ ಹೊಸತನವನ್ನು ಕಲಿತು ಮಕ್ಕಳಲ್ಲಿ ಅದನ್ನು ಅಳವಡಿಸಬಹುದು ಮತ್ತು ಈ ಕಾರ್ಯಗಾರದಿಂದ ಶಿಕ್ಷಕರು ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಬಹುದು.ಆದ್ದರಿಂದ ಪ್ರತಿವರ್ಷ ಎರಡು ಸಲ ಚಿತ್ರಕಲಾ ಶಿಕ್ಷಕರ ಕಾರ್ಯಗಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಸಿ ಮನ್ನಿಕೇರಿ ಅವರು ಮಾತನಾಡುತ್ತಾ, ನಮ್ಮಲ್ಲಿ ಇರುವಂತಹ ಜ್ಞಾನವನ್ನು ಮತ್ತೋಬ್ಬರ ಜೊತೆ ಹಂಚಿಕೊಳ್ಳಲು ಈ ಕಾರ್ಯಗಾರ ಒಂದು ಮಾರ್ಗದರ್ಶಿ ಇದ್ದ ಹಾಗೆ. ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ಎಸ್ ಎಸ್ ಎಲ್ ಸಿ ಮಕ್ಕಳಿಗೋಸ್ಕರ ಹಮ್ಮಿಕೊಂಡ ಈ ಕಾರ್ಯಗಾರದಲ್ಲಿ ಹೊಸ ಹೊಸ ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಚಿತ್ರಗಳನ್ನು ಬಿಡಿಸುವ ಸ್ಕಿಲ್ ಗಳನ್ನು ಕಲಿತು ಮಕ್ಕಳಿಗೂ ಕಲಿಸಿ ಕ್ರಿಯಾಶೀಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಮಾರ್ಗದರ್ಶಿ ಶಿಕ್ಷಕರಾಗಿರಿ ಎಂದು ಹಾರೈಸಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ಮಾತನಾಡಿದ, ಎಲ್ ವೈ ಅಡಿಹುಡಿ ಅವರು ಎಲ್ಲ ಶಿಕ್ಷಕರ ಜೊತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಚಿತ್ರಕಲೆಯನ್ನುವುದು ಮನುಷ್ಯ ಜೀವನಕ್ಕೊಂದು ಆಶಾಕಿರಣ ಇದ್ದ ಹಾಗೆ.ಒಳ್ಳೆಯ ಚಿತ್ರಕಲಾ ಶಿಕ್ಷಕರು ಈ ಕಾರ್ಯದ ಮುಖಾಂತರ ಹೊಸತನವನ್ನು ಬೆಳೆಸಿಕೊಂಡು ಮಕ್ಕಳಲ್ಲಿಯೂ ಹೊಸತನ ಮೂಡಿಸುವಲ್ಲಿ ಕಾರ್ಯ ಪ್ರವೃತ್ತರಾಗಿರಿ ಎಂದರು.
ಈ ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಎಸ್ಎಸ್ಆರ್ ಪ್ರೌಢಶಾಲೆಯ ಉಪಪ್ರಾಚಾರ್ಯರು ಆಗಿರುವ ಬಿ ಕೆ ಕಾಡಪ್ಪಗೋಳ ಮಾತನಾಡಿ ಚಿತ್ರಕಲಾ ಶಿಕ್ಷಕರು ನಮ್ಮ ಎಲ್ಲಾ ವಿಷಯ ಶಿಕ್ಷಕರಿಗೆ ಸಹಾಯಕರಾಗಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವುದರಲ್ಲಿ ಚಿತ್ರಕಲಾ ಶಿಕ್ಷಕರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಜಿ ಆರ್ ಬಾಗೋಜಿ ಹಾಗೂ ಬಿ ಐ ಬಡಿಗೇರ್ ಚಿತ್ರಕಲಾ ಶಿಕ್ಷಕರು ವಿಜ್ಞಾನ ವಿಷಯದ ಚಿತ್ರಗಳನ್ನು ಚಿತ್ರಿಸುವ ಪದ್ಧತಿಯನ್ನು ಪ್ರತ್ಯಕ್ಷಿಕೆ ಪಾಠವನ್ನು ನೀಡಿದರು.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದಂತಹ ಮೂಡಲಗಿ ತಾಲೂಕ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಎನ್ ಬಿ ಕದಂ ಅವರು ಮಾತನಾಡಿ ನಮ್ಮ ಚಿತ್ರಕಲಾ ಶಿಕ್ಷಕರ ಸಂಘವು ಚಿತ್ರಕಲಾ ಶಿಕ್ಷಕರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಕಾರ್ಯನಿರ್ವಹಿಸುತ್ತಿದೆ ನಮ್ಮ ವಲಯದ ಎಲ್ಲ ಚಿತ್ರಕಲಾ ಶಿಕ್ಷಕರು ಕೈ ಜೋಡಿಸಿ ಸಂಘವನ್ನು ಬಲಪಡಿಸಬೇಕೆಂದು ಕೋರಿದರು.
ಸಮಾಜ ವಿಜ್ಞಾನದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಯುತ ಆರ್ ಎಸ್ ಮಗದುಮ್ ಹಾಗೂ ಎಸ್ ಎ ಹುಗ್ಗಿ ಭಾರತದ ನಕ್ಷೆಯನ್ನು ಸುಲಭವಾಗಿ ಚಿತ್ರಿಸಿ ಭಾಗಗಳನ್ನು ಗುರುತಿಸುವ ರೀತಿಯನ್ನು ಹೇಳಿಕೊಟ್ಟರು.
ಈ ಕಾರ್ಯಾಗಾರದಲ್ಲಿ ಮೂಡಲಗಿ ವಲಯದ 30 ಜನ ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದರು ಹಾಗೂ ಈ ಕಾರ್ಯದ ಸದುಪಯೋಗಪಡಿಸಿಕೊಂಡರು.
ಮೂಡಲಿಗಿ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬೆಂಗಳೂರು ಇವರು ನಡೆಸುವ ಲೋವರ್ ಮತ್ತು ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರತಿ ಗ್ರೇಡ್ ನಲ್ಲಿ ಸಾಧನೆಯನ್ನು ತೋರಿದ ಪ್ರತಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಅಭಿನಂದನಾ ಪತ್ರಗಳ ವಿತರಣೆ ಬಿ ಐ ಬಡಿಗೇರ ಅವರು ಮಾಡಿದರು.
ಕಲಾಕ್ಷೇತ್ರದಲ್ಲಿ ಸಾಧನೆಗೈದ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ ಎಸ್ ಎಸ್ ಕುರಣೆ “ಭಾರತ ಸೇವಾರತ್ನ” ಮತ್ತು” ಕಲಾರತ್ನ ರಾಜ್ಯ” ಪ್ರಶಸ್ತಿ ವಿಜೇತರು. ಚಿತ್ರಕಲಾ ಶಿಕ್ಷಕರು, ಎಸ್ ಎಸ್ ಆರ್ ಪ್ರೌಢ ಶಾಲೆ ಮೂಡಲಗಿ.ಇವರಿಗೆ ಡಯಟ್ ಚಿಕ್ಕೋಡಿಯ ಪರವಾಗಿ ಉಪನ್ಯಾಸಕೀಯರಾದ ಶ್ರೀಮತಿ ಭಾರತಿ ಸನದಿಯವರು ಮತ್ತು ಮೂಡಲಗಿ ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘದವರು ಸನ್ಮಾನಿಸಿದರು.
ನಿರೂಪಣೆಯನ್ನ ಆರ್ ಎಸ್ ಬಡೇಸ ಮಾಡಿದರು, ಸ್ವಾಗತವನ್ನ ಎಚ್ ಎಸ್ ಪಾಟೀಲ ಮಾಡಿದರು.