ಮೈಸೂರು: ಇಲ್ಲಿ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ಅಧಿಕಾರಿಗಳ ಸಂಘ ಬೆಂಗಳೂರು ಇವರ ವತಿಯಿಂದ ರಾಜ್ಯಮಟ್ಟದ ಸಮುದಾಯ ಆರೋಗ್ಯ ಅಧಿಕಾರಿಗಳ ಸಂರಕ್ಷಣಾ ಸಮಾವೇಶ 2025 ಜರುಗಿತು.
ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರಾದ ಮಾನ್ಯ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಗ್ರಾಮೀಣ ಸ್ವಾಸ್ಥ್ಯ ಸೇವಾ ಪ್ರಶಸ್ತಿ-2025 ಬೆಳಗಾವಿ ಜಿಲ್ಲೆಯ ಶ್ರೀಮತಿ ಭಾಗ್ಯಶ್ರೀ ಲವಕುಶ ಧನ್ನಿ ಅವರಿಗೆ ನೀಡಲಾಯಿತು. ರಾಜ್ಯಾಧ್ಯಕ್ಷ ಮಮಿತ್ ಗಾಯಕ್ವಾಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಚನ್ನಪ್ಪ ನಾಯಕ, ರಾಜ್ಯ ಸಹ-ಕಾರ್ಯದರ್ಶಿ ಅಮೃತ ಮಜ್ಜಗಿ, ಬೆಳಗಾವಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಕೋಳಿ ಹಾಗೂ ತಾಲೂಕ ಕಾರ್ಯದರ್ಶಿ ಶಶಿಕಾಂತ ಉಪಸ್ಥಿತರಿದ್ದರು.