ಯರಗಟ್ಟಿ: ಇಲ್ಲಿನ ಕೆಪಿಎಸ್ ಯರಗಟ್ಟಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ವತಿಯಿಂದ ಆಯೋಜಿಸಲಾದ ಮಕ್ಕಳ ಕನಸಿನ ನೇತಾರ ಜವಾಹರ್ ಲಾಲ್ ನೆಹರು ಕುರಿತಾದ ಭಾಷಣ ಸ್ಪರ್ಧೆಯಲ್ಲಿ ತಾಲೂಕ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಾಗೂ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿ ಕುಮಾರಿ ಶ್ರದ್ಧಾ ಪರಕನಟ್ಟಿ ಭಾಷಣ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾಳೆ. ಇವಳಿಗೆ ಕೆಪಿಎಸ್ ಯರಗಟ್ಟಿ ಶಾಲೆಯ ಪ್ರಾಥಮಿಕ ವಿಭಾಗದ ಶಿಕ್ಷಕಿಯವರಾದ ಶ್ರೀಮತಿ ಪಿ.ಎಸ ಪರಕನಟ್ಟಿ ಅವರು ಮಾರ್ಗದರ್ಶನ ನೀಡಿ ಬೆಂಬಲಿಸಿದರು.
ವಿದ್ಯಾರ್ಥಿನಿಗೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ ಶಾಲೆಯ ಪ್ರಾಂಶುಪಾಲರಾದ ಕಿರಣ ಚೌಗಲಾ, ಶ್ರೀಮತಿ ಎ. ಆರ್ ಮಠಪತಿ ಉಪ ಪ್ರಾಂಶುಪಾಲರು, ಉಖ್ಯಾಧ್ಯಾಪಕರಾದ ಎಸ.ಎ ಸರೀಕರ, ಕೆಪಿಎಸ್ ಯರಗಟ್ಟಿ ಶಾಲೆಯ ಪ್ರಾಥಮಿಕ ವಿಭಾಗದ ಶಿಕ್ಷಕಿಯವರಾದ ಶ್ರೀಮತಿ ಪಿ.ಎಸ ಪರಕನಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶಂಕರ ಚೌಗಲಾ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ನಂದಗಾವಿ, ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದ ಸರ್ವ ಶಿಕ್ಷಣ ಬಳಗ ಹಾಗೂ ಎಸ್.ಡಿ.ಎಂ.ಸಿ.ಯ ಎಲ್ಲಾ ಸದಸ್ಯರ ವತಿಯಿಂದ ಹಾರ್ದಿಕವಾದ ಅಭಿನಂದನೆಗಳನ್ನ ಸಲ್ಲಿಸಲಾಯಿತು.
ಇದೆ ರೀತಿ ನಿನ್ನ ಕೀರ್ತಿ ಮುಂದುವರೆಯಲಿ ಎಂದು ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಮೂಲಕ ಆಶಿಸುತ್ತಾ, ಕುಮಾರಿ ಶ್ರದ್ಧಾ ಪರಕನಟ್ಟಿಗೆ ಅಭಿನಂದಿಸುತ್ತೇವೆ.💐💐