ಹುಕ್ಕೇರಿ:ಸರ್ಕಾರಿ ಹಿರಿಯ ಹಾಗೂ ಪ್ರೌಢ ಶಾಲೆಗೆ ಹೋಗುವ ದಡ್ಡಿ-ಹತ್ತರಗಿ ಮಾರ್ಗದ ಶಾಲಾ ಮಕ್ಕಳಿಗೆ ಬೆಳಿಗ್ಗೆ ಮತ್ತು ಶಾಲೆ ಬಿಡುವ ಸಮಯದಲ್ಲಿ ಕಳೆದ ೧೫ದಿನಗಳಿಂದ ಸಂಕೇಶ್ವರ ವಿಭಾಗದ ಕೆಎಸ್‌ಆರ್‌ಸಿ ಬಸ್ಸುಗಳನ್ನು ಬಿಡುತ್ತಿಲ್ಲಾ ಎಂದು ಸ್ಥಳೀಯ ಬಿದರೆವಾಡಿ, ಮಾನಗಾಂವ,ಗುಡಗನಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ದಡ್ಡಿಯ ಪ್ರೌಢ ಶಾಲೆಗೆ ಹೋಗಬೇಕಾದರೆ ಹಾಗೂ ಮರಳಿ ಬರುವಾಗ ಅನೇಕ ಸಮಸ್ಯೆ ಎದುರಿಸುತ್ತಾ ಇದ್ದೇವೆ ಎಂದು ತಮ್ಮ ನೋವುಗಳ ಶಾಲಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹದನೈದು ದಿನಗಳ ಹಿಂದಿನಿAದ ಬೆಳಿಗ್ಗೆ ೯ಗಂಟೆಗೆ ಬರಬೇಕಾದ ಬಸ್ಸು ೧೦-೩೦ಕ್ಕೆ ಬರುತ್ತಿದೆ ಇದ್ದರಿಂದ ನಮಗೆ ತರಗತಿಗಳು ತಪ್ಪುತ್ತಿದೆ ಮತ್ತು ಪರೀಕ್ಷಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲಾ ಬಹಳಷ್ಟು ತಂದೆ ತಾಯಿಂದಿರು ತಮ್ಮ ಮಕ್ಕಳನ್ನು ತಾವೇ ಶಾಲೆಗೆ ದ್ವಿಚಕ್ರದ ಮೇಲೆ ಕಳಿಸಿ ಬರುವ ಪರಿಸ್ಥಿತಿ ಇದೆ ಮತ್ತು ಕೇಲ ವಿದ್ಯಾರ್ಥಿಗಳು ಬೇರೆ ದ್ವಿಚಕ್ರ ವಾಹನಗಳ ಮೇಲೆ ಕೈ ಮಾಡಿ ಶಾಲೆಗೆ ಹೋಗುವ ಪರಿಸ್ಥಿತಿ ಒದಗಿದೆ. ಹೇಗಾದರೂ ಬಾಲಕರು ದ್ವಿಚಕ್ರ ವಾಹನದ ಮೇಲೆ ಹೋಗಬಹುದು ಆದರೆ ಬಡಪಾಯಿ ಬಾಲಕಿಯರು ಬೇರೆಯವರ ದ್ವಿಚಕ್ರ ವಾಹನ ಮೇಲೆ ಬಾಲಕಿಯರು ನಿರಾಕರಿಸುತ್ತಾರೆ. ಸಂಜೆ ೪:೩೦ಕ್ಕೆ ಬರುವ ಬಸ್ಸು ೬ಗಂಟೆಗೆ ಬರುತ್ತಿದೆ ಸುಮಾರು ಒಂದುವರೆ ಗಂಟೆವರಗೆ ಕಾಯಬೇಕು ಇಲ್ಲಾವಾದರೆ ನಡೆದುಕೊಂಡ ಸುಮಾರು ೫ಕಿಮೀ ವರಗೆ ಹೋಗುವದ್ದರಿಂದ ಮನೆಗೆ ಹೋಗಬೇಕಾದರೆ ಪ್ರತಿದಿನ ಸಂಜೆ ೭ಗಂಟೆವಾಗುತ್ತಿದೆ.
ಒಟ್ಟಾರೆ ಮಕ್ಕಳ ಸಮಸ್ಯೆಯನ್ನು ಸಂಕೇಶ್ವರ ವಿಭಾಗದ ಕೆಎಸ್‌ಆರ್‌ಸಿ ಘಟಕದವರು ನಿವಾರಣೆ ಮಾಡಬೇಕು ಇಲ್ಲಾವಾದರೆ ಮಕ್ಕಳು ಮತ್ತು ಪಾಲಕರು ಎರಡು ದಿನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಚ್ಚರಿಕೆ ನೀಡಿದ್ದಾರೆ.