ಹುಕ್ಕೇರಿ: ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ 90.8 ಸಮುದಾಯ ರೇಡಿಯೋ ಕೇಂದ್ರ, ಯಲ್ಲಾಪುರಕ್ಕೆ ಬೈಲಹೊಂಗಲಿನ ಕೆ.ಆರ್.ಸಿ.ಈ.ಎಸ ಜಿ.ಜಿ.ಡಿ ಕಲೆ, ವಾಣಿಜ್ಯ ಶಾಸ್ತ್ರ ಹಾಗೂ ಎಸ.ವಿ.ಎಸ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕದ ವಿದ್ಯಾರ್ಥಿಗಳು ಭೇಟಿ ನೀಡಿ ವಿವಿಧ ಜಾಗ್ರತಿ ಹಾಗೂ ಭಾವ ಗೀತೆ, ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸಗಳನ್ನು ನೀಡುವ ಮೂಲಕ ಸಮುದಾಯವನ್ನು ಸಶಕ್ತ ಗೊಳಿಸುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ಮಹಿಳಾ ಸಬಲೀಕರಣ ಘಟಕದ ಮುಖ್ಯಸ್ಥರಾದ ಶ್ರೀಮತಿ ಗೌತಮಿ ಬಳಿಮನೆ ಮಾತನಾಡಿ, ಯುವಜನತೆಗೆ ಕೇವಲ ಔಪಚಾರಿಕ ಶಿಕ್ಷಣ ನೀಡುವದಲ್ಲದೆ ಮಹಿಳಾ ಸಬಲೀಕರಣ ಘಟಕದ ಮೂಲಕ ವರ್ಷದೂದ್ದಕ್ಕೂ ವಿನೂತನ ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಬೆಳೆಸಲಾಗುತ್ತಿದೆ ಅದರ ಭಾಗವಾಗಿ ಇಂತಹ ಭೇಟಿ ಆಯೋಜಿಸಲಾಗಿದೆ. ಹಾಗಾಗಿ ಇದು ವಿದ್ಯಾರ್ಥಿಗಳಿಗೆ ಒಂದು ನೂತನ ಹಾಗೂ ಉಪಯುಕ್ತವಾದ ಅನುಭವ ಎಂದರು.
ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ, ಎಂ. ಎಸ್ ಚೌಗಲಾ ಮಾತನಾಡಿ, ಸಮಸ್ಯೆಗೊಳಗಾದ ಮಹಿಳೆಯರ ಪುನರ್ವಸತಿಗಾಗಿ ಸಂಸ್ಥೆಯು ಶಕ್ತಿ ಸದನ, ಸಾಂತ್ವನ, ಕೌಟುಂಬಿಕ ಸಲಹಾ ಕೇಂದ್ರದಂತಹ ಚಟುವಟಿಕೆಗಳನ್ನು ನಡೆಸುತ್ತಿದೆ ಇಂತಹ ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಯುವ ಜನತೆಯಿಂದ ಆಗಬೇಕು ಎಂದರು.
ಈ ಸಂದರ್ಭದಲ್ಲಿ, ಪ್ರೊ ವಿ.ಏನ್ ಕುಲಕರ್ಣಿ, ಡಾ.ನಾಗರತ್ನಮ್ಮ ಕೆ. ಎಸ್, ಶ್ರೀಮತಿ ಎಸ್. ಎಂ ಪಾಟೀಲ್, ಶ್ರೀಮತಿ ದೀಪ, ಕುಮಾರಿ ಗೀತಾ ಬನಜಿ ಹಾಗೂ ವಿದ್ಯಾರ್ಥಿಗಳು, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ, ಆರ್. ಜೆ ಮೀರಾ ಹಾಗೂ ಆರ್. ಜೆ ಚೇತನ ಉಪಸ್ಥಿತರಿದ್ದರು.