ಅಂಕಲಿ: ಕೆ.ಎಲ್.ಇ ಸಂಸ್ಥೆಯ ಶ್ರೀಮತಿ ಶಾರದಾದೇವಿ ಕೋರೆ ಸಂಯುಕ್ತ ಪದವಿ ಪೂರ್ವ ಕಾಲೇಜು, ಅಂಕಲಿಯಲ್ಲಿ 2025–26ನೇ ಶೈಕ್ಷಣಿಕ ಸಾಲದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಹಾಲಿಂಗಪುರದ ಉಪನ್ಯಾಸಕ ಪ್ರೊ. ಶಿವಲಿಂಗ ಸಿದ್ನಾಳ ಅವರು, “ಇಂದಿನ ವಿದ್ಯಾರ್ಥಿಗಳು ಸಿಕ್ಕಿರುವ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ಮಹಾತ್ಮರಂತೆ ಬದುಕಲು ಪ್ರಯತ್ನಿಸಬೇಕು” ಎಂದು ಬೋಧನಾತ್ಮಕ ಸಂದೇಶ ನೀಡಿದರು. ಅವರು ಮುಂದುವರೆದು, “ಬದುಕಿನಲ್ಲಿ ಗುರಿಯಿರಬೇಕು. ಗುರಿಯಿಲ್ಲದ ಜೀವನ ಬೋರ್ಡ್ ಇಲ್ಲದ ಬಸ್ಸಿನಂತಾಗುತ್ತದೆ. ಮೊಬೈಲ್ ಹಾಗೂ ಟಿವಿಯಿಂದ ದೂರವಿದ್ದು, ಶಿಸ್ತನ್ನು ರೂಢಿಸಿಕೊಂಡರೆ, ಸಮಾಜವೇ ನಿಮ್ಮನ್ನು ಗುರುತಿಸುತ್ತದೆ” ಎಂದರು.
ಅವರು ಅನೇಕ ಮಹಾನ್ ವ್ಯಕ್ತಿತ್ವಗಳ ಜೀವನಕಥೆಗಳನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು. “ತಂದೆ-ತಾಯಿಯ ಪರಿಶ್ರಮದ ಸ್ಮರಣೆ ಸದಾ ನಿಮ್ಮ ಕಣ್ಣ ಮುಂದೆ ಇಡಿಕೊಳ್ಳಿ, ಅದು ನಿಮ್ಮನ್ನು ಸದ್ಮಾರ್ಗದಲ್ಲೇ ಇಡುವುದೆಂದು” ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಸುರೇಶ ಪಾಟೀಲ ಅವರು ಮಾತನಾಡುತ್ತಾ, “ಕೆ.ಎಲ್.ಇ ಸಂಸ್ಥೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಿದೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಸಾಧನೆ ಮೂಲಕ ಮಾತನಾಡುವಂತಾಗಬೇಕು” ಎಂದು ಪ್ರೇರಣಾತ್ಮಕ ಸಂದೇಶ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪಿ. ಎನ್. ತಳವಾರ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಡಾ. ಸುಬ್ರಾವ್ ಎಂಟೆತ್ತಿನವರ ಹಾಗೂ ಉಪನ್ಯಾಸಕ ವೈ. ಬಿ. ಮಾಚಕನೂರ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಎಸ್. ಕೆ. ಖೋತ ನಿರೂಪಿಸಿದರು, ಕೆ. ಎಸ್. ಗುಡೋಡಗಿ ಪರಿಚಯಿಸಿದರು ಹಾಗೂ ಎನ್. ಎಸ್. ಅಮಟೆ ವಂದಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143