ಗೋಕಾಕ : ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸುರೇಖಾ ಪಾಟೀಲಗೆ ರೋಟರಿ ಕ್ಲಬ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಗೋಕಾಕವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಗೋಕಾಕ ನಗರದ ರಕ್ತಭಂಡಾರ ಸಭಾಭವನದಲ್ಲಿ ಆಯೋಜಿಸಿದ್ದ ರೋಟರಿ ಸಂಸ್ಥೆ ಹಾಗೂ ಇನ್ನರ ವ್ಹೀಲ್ ಸಂಸ್ಥೆಯ ೨೦೨೫-೨೬ ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಹಸ್ತಂತರ ಸಮಾರಂಭದಲ್ಲಿ ಘೋಡಗೇರಿ ಗ್ರಾಮದ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಸನ್ಮಾನಿಸಿ ಮಾತನಾಡುತ್ತಾ ರೋಟರಿ ಸಂಸ್ಥೆಯಿಂದ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಮನುಷ್ಯ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜವಾಬ್ದಾರಿ ಮರೆಯುತ್ತಿದ್ದು ಇದನ್ನು ನೆನಪಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು.
ವೈಯಕ್ತಿಕ ಬೇಕು ಬೇಡಿಕೆಗಳ ನಡುವೆ ಮಾನವ ಸಾಮಾಜಿಕ ಜವಾಬ್ದಾರಿ ರೋಟರಿ ಸಂಸ್ಥೆ ಸಮಾಜಕ್ಕೆ ತಮ್ಮ ಜವಾಬ್ದಾರಿ ಏನು? ಎಂಬುದನ್ನು ತೋರಿಸುವ ಕಾರ್ಯ ಮಾಡುತ್ತಿದೆ ಸೇವಾ ಅಂತಾ ಬಂದಾಗ ದೇಶದಲ್ಲಿ ದೊಡ್ಡ ಸೇವಾ ಸಂಸ್ಥೆ ಅಂದರೆ ರೋಟರಿ ಸಂಸ್ಥೆ. ಈ ಸಂಸ್ಥೆಯಲ್ಲಿ ಗೋಕಾಕ ನಗರದಲ್ಲಿ ೧೯೬೯ ರಿಂದ ನಿರಂತರ ಸಮಾಜ ಸೇವೆ ಮಾಡುತ್ತಿದೆ. ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದದವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಅಧಿಕಾರ ಹಸ್ತಾಂತರ ಅಧಿಕಾರಿ ರಾಜಶೇಖರ ತಾಲಗಾಂವ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ನೂತನ ಅಧ್ಯಕ್ಷರು ರೋಟರಿ ಮೌಲ್ಯ ಅರಿತು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪಣ ತೊಡಬೇಕು ರೋಟರಿಯಲ್ಲಿ ಗುರುತಿಸಿಕೊಂಡವರು ಸಮಾಜದೊಂದಿಗೆ ಬೆರೆತು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಮತ್ತು ನೂತನ ಪದಾಧಿಕಾರಿಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಹಾರೈಸಿದರು. ಘೋಡಗೇರಿ ಶ್ರೀ ಮಲ್ಲಯ್ಯ ಮಹಾಸ್ವಾಮೀಜಿ ಸಾನ್ನಿದ್ಯಾ ವಹಿಸಿದ್ದರು.
ನಂತರ ಇನ್ನರ ವ್ಹಿಲ್ ಸಂಸ್ಥೆ ಅಧ್ಯಕ್ಷೆಯಾಗಿ ಅನುಪಾ ಕೌಶಿಕ, ಕಾರ್ಯದರ್ಶಿಯಾಗಿ ಗಿರಿಜಾ ಮುನ್ನೊಳಿಮಠ ಖಜಾಂಚಿಯಾಗಿ ಸುಮನ ಕಲ್ಯಾಣಶೆಟ್ಟಿ ಅವರಿಗೆ ಶಾಲಿನಿ ಚೌಗಲೆ ಅಧಿಕಾರ ಹಾಸ್ತಾಂತರಿಸಿದರು.
ಈ ವೇಳೆ ರೋಟರಿ ಸಹಾಯಕ ಪ್ರಾಂತಪಾಲ ಮೇಘರಾಜ ಪರಮಾರ, ನೂತನ ಅಧ್ಯಕ್ಷ ಗಿರೀಶ ಝಂವರ ಕಾರ್ಯದರ್ಶಿ ಬಸವರಾಜ ಹೂಳ್ಳೇರ, ಖಜಾಂಚಿ ವಿಶ್ವನಾಥ ಕಡಕೋಳ, ನಿಕಟಪೂರ್ವ ಅಧ್ಯಕ್ಷ ಡಾ. ಸಿದ್ದಣ್ಣ ಕಮತ್, ಕಾರ್ಯದರ್ಶಿ ರಾಜಶೇಖರ ಮುನ್ನೊಳಿಮಠ, ಜಯಾ ಕಮತ್ ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143