ಬೆಳಗಾವಿಯ ಸರಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸ್ವಚ್ಛತಾ ಹೀ ಸೇ ವಾ ಆಂದೋಲನ
ಬೆಳಗಾವಿ: ನಗರದ ಸರಕಾರಿ ಸರಸ್ವತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸ್ವಚ್ಛತಾ ಹೀ ಸೇ ವಾ ಆಂದೋಲನ ಕಾರ್ಯಕ್ರಮ ಜರುಗಿತು.
ಸರಕಾರಿ ಸರಸ್ವತಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶಹಾಪುರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಚ್ಛತಾ ಈ ಸೇವಾ ಆಂದೋಲನವನ್ನ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಎನ್. ಬಿ. ಶಿರಶ್ಯಾಡರವರು, “ಮಹಾತ್ಮ ಗಾಂಧೀ ಜಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವುದು ಮಾತ್ರವಲ್ಲದೆ, ಸ್ವಚ್ಛ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ಕಂಡಿದ್ದರು”. ದೇಶವನ್ನ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇಡುವ ಮೂಲಕ ಭಾರತ ಮಾತೆಯ ಸೇವೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀಮತಿ ಅನುಸೂಯಾ.ವಿ. ಹಿರೇ ಮಠ ಅವರು ಎಲ್ಲರಿಗೂ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿದರು ಮತ್ತು ವಿದ್ಯಾರ್ಥಿಗಳಿಗೆ ವರ್ಷದ 100 ಗಂಟೆಗಳನ್ನು ದೇಶದ ಸ್ವಚ್ಛತೆಗಾಗಿ ಮೀಸಲು ಇಡಬೇಕು ಎಂದು ತಿಳಿಸಿದರು. ನಮ್ಮ ಸುತ್ತಮುತ್ತಲಿನ ಪ್ರದೇ ಶವನ್ನು ಸ್ವಚ್ಛಗೊಳಿಸಿದರೆ, ಇಡೀ ಭಾರತವೇ ಸ್ವಚ್ಛಗೊಳ್ಳುತ್ತದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಬೇರೆಯವರು ಸಹ ಕಸವನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶ್ರೀಮತಿ ಶಿಲ್ಪಾ . ಕುಂಬಾರ ಆರೋಗ್ಯ ನಿರೀಕ್ಷಕರು ಮಹಾನಗರ ಪಾಲಿಕೆ ಬೆಳಗಾವಿ ಇವರು ಎಲ್ಲವಿದ್ಯಾ ರ್ಥಿಗಳಿಗೆ ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸುವುದರ ಕುರಿತು ವಿವರವಾಗಿ ಮಾಹಿತಿಯನ್ನು ನೀಡಿದರು.
ನಂತರ ಬೆಳಗಾವಿಯ ಶಹಪುರ ಮತ್ತು ಕಾಸಭಾಗದ ಬೀದಿಗಳಲ್ಲಿ ಸ್ವಚ್ಛತಾ ಹೀ ಸೇ ವಾ ಕಾರ್ಯ ಕ್ರಮದ ನಿಮಿತ್ತ ಸ್ವಚ್ಛತೆಯ ಘೋಷಣೆಗಳನ್ನ ಕೂಗುತ್ತಾ ಜಾಗೃತಿ ಜಾತ ಕಾರ್ಯ ಕ್ರಮವನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ, ಲಕ್ಷ್ಮಣ್ ಗೌಡರ ಮತ್ತು ಶಹಪುರ ಮತ್ತು ಖಾಸಭಾಗದ ಎಲ್ಲ ಸುಪರ್ವೈಸರ್ ಮಹಾನಗರ ಪಾಲಿಕೆ ಬೆಳಗಾವಿ, ಭೀಮಣ್ಣ, ಸುಜಾತಾ ಮಡಿವಾಳ, ಬಿ.ಸಿ. ಬಡಿಗೇರ, ಜ್ಯೋತಿ ಮರೆಗುದ್ದಿ, ರೇಷ್ಮಾ ಮುಂತಾದ ಕಾಲೇಜಿನ ಉಪನ್ಯಾಸಕರು ಹಾಗೂ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ17 ರ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.