ಹುಕ್ಕೇರಿ: ತಾಲೂಕಿನ ಯರಗಟ್ಟಿ ಗ್ರಾಮದ ಕೆ.ಪಿ.ಎಸ ಶಾಲೆಯಲ್ಲಿ ಭಾರತ ಸೇವಾ ದಳದ ಮಕ್ಕಳಿಗಾಗಿ ತಾಲೂಕಾ ಮಟ್ಟದ ಮಕ್ಕಳ ನಾಯಕತ್ವ ತರಬೇತಿ ಶಿಬಿರ ಜರುಗಿತು.
ಉದ್ಘಾಟನೆಯ ನಂತರ ಮಾತನಾಡಿದ ಪ.ಪೂ.ಶ್ರೀ ಬ್ರಹ್ಮಾನಂದ ಅಜ್ಜನವರು ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಭಾರತ ಸೇವಾದಳಕ್ಕೆ ಶಿಕ್ಷಕರೇ ಅಡಿಗಲ್ಲು. ಈ ಸಂಸ್ಥೆಯ ಮುಖ್ಯ ಉದ್ದೇಶವು ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಎಂದು ಹೇಳಿದರು.
ನಂತರ ಕೆ.ಪಿ.ಎಸ ಯರಗಟ್ಟಿ ಪ್ರಾಂಶುಪಾಲರಾದ ಕಿರಣ ಚೌಗಲಾರವರು ಮಾತನಾಡಿ, ಮಕ್ಕಳಿಗೆ ಶಿಸ್ತು ಮುಖ್ಯ ಹಾಗಾಗಿ ಗುರು ಹಿರುಯರ ಮಾತು ಕೇಳುವುದರಿಂದ ಶಿಸ್ತು ಬರುತ್ತದೆ. ನಮಗಿಂತ ದೊಡ್ಡವರಿಗೆ ಗೌರವ ಕೊಡುವುದೇ ಮಕ್ಕಳ ಮೂಲ ಆದ್ಯತೆ ಎಂದು ಹೇಳಿದರು.
ತದನಂತರ ಮಾತನಾಡಿದ, ಸಿ.ಪಿ.ಐ ಜಾವೀದ ಮುಷಾಪುರಿ ಮಕ್ಕಳು ಅನವಶ್ಯಕ ವಿಷಯಗಳಿಗೆ ತಲೆ ಹಾಕದೆ ಬದುಕಲ್ಲಿ ಒಂದು ನಿರ್ದಿಷ್ಟ ಗುರಿಯನ್ನ ಇಟ್ಟುಕೊಂಡು ಅದಕ್ಕಾಗಿಯೇ ಹೋರಾಡಬೇಕು. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಐ.ಎ.ಎಸ ಹಾಗೂ ಐ.ಪಿ.ಎಸ ಆಗುವಂತಹ ದೊಡ್ಡ ಕನಸುಗಳನ್ನ ನೀವು ಕಾಣಬೇಕು. ಇನ್ನುಈ ಭಾರತ ಸೇವಾ ದಳ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು, ಹಾಗೂ ಇದರೊಂದಿಗೆ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳೆಸುವುದಾಗಿದೆ. ಹಾಗಾಗಿ ಎಲ್ಲರೂ ಉತ್ತಮ ಪ್ರಜೆಯಾಗಿ ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ,ಪ.ಪೂ.ಶ್ರೀ ಬ್ರಹ್ಮಾನಂದ ಅಜ್ಜನವರು ಸುಕ್ಷೇತ್ರ ಶ್ರೀ ಕಾಳಿಕಾದೇವಿ ಮಠ ಯರನಾಳ, ಕಿರಣ ಚೌಗಲಾ ಪ್ರಾಂಶುಪಾಲರು ಕೆ.ಪಿ.ಎಸ ಯರಗಟ್ಟಿ, ಶಂಕರ ಚೌಗಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಕೆ.ಪಿ.ಎಸ ಯರಗಟ್ಟಿ, ಶ್ರೀಮತಿ ಪ್ರಭಾವತಿ ಪಾಟೀಲ್ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುಕ್ಕೇರಿ, ಶ್ರೀಮತಿ ಅಶ್ವಿನಿ ಆಯಟ್ಟಿ ಜಿಲ್ಲಾ ಸಂಘಟಕರು ಭಾರತ ಸೇವಾ ದಳ ಚಿಕ್ಕೋಡಿ, ಜಾವೀದ ಮುಷಾಪುರಿ ಸಿ.ಪಿ.ಐ ಯಮಕನಮರಡಿ, ಮಲ್ಲಿಕಾರ್ಜುನ ನಂದಗಾವಿ ಉಪಾಧ್ಯಕ್ಷರು ಎಸ.ಡಿ.ಎಂ.ಸಿ ಕೆ.ಪಿ.ಎಸ ಯರಗಟ್ಟಿ, ಶ್ರೀಮತಿ ಅನ್ನಪೂರ್ಣ ಮಠಪತಿ ಉಪ ಪ್ರಾಂಶುಪಾಲರು ಕೆ.ಪಿ.ಎಸ ಯರಗಟ್ಟಿ, ಶ್ರೀಮತಿ ಪಿ.ಎಸ ಪರಕನಟ್ಟಿ ಸೇವಾದಳದ ಶಾಖಾ ನಾಯಕಿ, ಎಸ.ಎ ಸರಿಕರ ಹಿರಿಯ ಮುಖ್ಯ ಶಿಕ್ಷಕರು, ಗುರುಹಿರಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.