ಚನ್ನಮ್ಮನ ಕಿತ್ತೂರು: ದೇವಗಾಂವ ಗ್ರಾಮದ ಭರವಸೆಯ ಲೇಖಕಿ ಹಾಗೂ ಶ್ರೇಷ್ಠ ಶಿಕ್ಷಕಿ ಮೀನಾಕ್ಷಿ ಸುರೇಶ್ ಭಾಂಗಿ (ಸೂಡಿ) ಅವರನ್ನು ಗೌರವಿಸುವ ಅದ್ಧೂರಿ ಕಾರ್ಯಕ್ರಮವನ್ನು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಜೂನ್ 29, 2025 ರಂದು ನೆರವೇರಿಸಲಾಯಿತು.
ಶ್ರೀಮತಿ ಮೀನಾಕ್ಷಿ ಸೂಡಿ ಅವರು ಈಚೆಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಎರಡು ಮಹತ್ವದ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಅವುಗಳು ಕರ್ನಾಟಕ ಮಹಿಳಾ ರತ್ನ ಮತ್ತು ಇಂಟರ್ ನ್ಯಾಷನಲ್ ಫ್ರೈಡ್ ಆಫ್ ಇಂಡಿಯಾ ಪ್ರಶಸ್ತಿಗಳು. ಇವರ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಮಹತ್ತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.
ಸನ್ಮಾನ ಸಮಾರಂಭದಲ್ಲಿ ಸಂಘದ ಪದಾಧಿಕಾರಿಗಳು, ಲೇಖಕಿಯರು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರ ಸಾಧನೆಗಳನ್ನು ಅಭಿನಂದಿಸಿದ ಭಾಷಣಗಳಲ್ಲಿ ಮೀನಾಕ್ಷಿ ಸೂಡಿಯವರು ಯುವ ಪೀಳಿಗೆಗೆ ಪ್ರೇರಣೆಯ ಪುಂಜವೆಂದು ವರ್ಣಿಸಲಾಯಿತು.
ಅವರು ಸ್ಥಾಪಿಸಿರುವ ಫೀನಿಕ್ಸ್ ಫೌಂಡೇಶನ್ ಸಂಸ್ಥೆಯ ಮೂಲಕ ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ನಿರಂತರ ಸೇವೆ ನೀಡುತ್ತಿರುವುದನ್ನು ಎಲ್ಲರೂ ಮೆಚ್ಚುಗೆಪಟ್ಟರು.
ಅವರ ಸಾಧನೆ ಇನ್ನಷ್ಟು ಉನ್ನತವಾಗಲೆಂದು ಸಮಾರಂಭದಲ್ಲಿ ಹಾರೈಕೆ ವ್ಯಕ್ತವಾಯಿತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143