ಮೈಸೂರ: ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಮೂಲಕ ಪ್ರತಿಭೆಗೆ ತಕ್ಕ ಮನ್ನಣೆ ನೀಡುವ ಸದ್ದುದೇಶದಿಂದ ಹಿನ್ನೆಲೆಯಲ್ಲಿ, ಟೀಂ ಮೈಸೂರು ತಂಡದ ವತಿಯಿಂದ ಶುಕ್ರವಾರ ೨೦೨೪ – ೨೫ ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85ಕ್ಕೂ ಹೆಚ್ಚು ಅಂಕಗಳನ್ನು ಪಡೆದು ತೇಗರ್ಡೆಯಾದ 42 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಗರದ ಇಟ್ಟಿಗೆಗೂಡಿನಲ್ಲಿರುವ ಮಾರಿಯಮ್ಮನ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಎಸ್.ಎಸ್.ಎಲ್.ಸಿ ಯ 27, ಪಿಯುಸಿಯ 15 ವಿದ್ಯಾರ್ಥಿಗಳಿಗೆ ಕೃಷ್ಣರಾಜ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀವತ್ಸ ಅವರು ಮೈಸೂರು ವಿ. ವಿ. ಯ ಪರೀಕ್ಷಾಂಗ ಕುಲಸಚಿವರು ಪ್ರೊ ಎನ್ ನಾಗರಾಜ್ ಹಾಗೂ ಸೇಫ್ ವೀಲ್ಸ್ ಪ್ರಶಾಂತ್ ರವರು ಹಾಗೂ ದಿ ಮೈಸೂರು ಮರ್ಚಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಬಿ ಕೋದಂಡರಾಮು ರವರು ಮತ್ತು ಇತರೆ ಗಣ್ಯರುಗಳಿಂದ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ತಮ್ಮ ತಂಡ ಹಸಿರು ಮೈಸೂರು ಅಭಿಯಾನದಡಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಪರಿಸರ ಕಾಳಜಿ ಬಗ್ಗೆ ತಿಳಿಸಿದರು. ದೇಶ ಭಕ್ತರ ಜಯಂತಿಗಳನ್ನು, ಯೋಧರ ಸ್ಮರಣೆ ಹೀಗೆ ಉಪಯುಕ್ತ ಕಾರ್ಯಕ್ರಮಗಳ ಮೂಲಕ ಜನರಲ್ಲಿ ದೇಶಭಕ್ತಿ ಮೂಡಿಸುತ್ತಿರುವುದಾಗಿ ತಮ್ಮ ತಂಡ ಶ್ರಮಿಸುತ್ತಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು. ಸಮಾಜಕ್ಕೆ ತಮ್ಮಿಂದಾದ ಸೇವೆಯನ್ನು ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸಬೇಕೆಂಬ ಸಲಹೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕರಾದ ಶ್ರೀವತ್ಸ ಅವರು ಪ್ರತಿಭೆಗೆ ಮನ್ನಣೆ ನೀಡುವ ಇಂತಹ ವಿಶಿಷ್ಟ ಸೇವಾ ಕಾರ್ಯವನ್ನು ಮತ್ತು ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಟೀಂ ಮೈಸೂರನ ಕಾರ್ಯ ವೈಖರಿಗಳ ಬಗ್ಗೆ ಸಂತಸ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ನಾಗರಾಜ್ ಅವರು ಮಾತನಾಡಿ, ಪತ್ರಿಭೆ ಎಲ್ಲರಲ್ಲಿಯೂ ಇರುತ್ತದೆ,ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಮುಖ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರ,ಪೋಷಕರ ಶ್ರಮವೂ ಇರುತ್ತದೆ,ಅವರನ್ನು ಮರೆಯಬಾರದೆಂಬ ಕಿವಿಮಾತನ್ನು ಹೇಳಿದರು. ಅಂಕಗಳಿಗಿಂತ ನಿಮ್ಮ ವ್ಯಕ್ತಿತ್ವ ಮುಖ್ಯ ,ಆತ್ಮವಿಶ್ವಾಸ ಪ್ರಧಾನವಾದುದು ಎಂದು ತಿಳಿಸಿದರು.
ಪ್ರತಿಭೆ ಎಲ್ಲರಲ್ಲಿಯೂ ಅಡಗಿರುತ್ತದೆ, ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ತಿಳಿಸಿದರು.ಅಂಕಗಳಿಗಿಂತ ಜ್ಞಾನ ಮುಖ್ಯವಾದುದು, ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ಅಪಮಾನಿಸಬೇಡಿ ಎಂದು ಪೋಷಕರಿಗೆ ತಿಳಿಸಿದರು.
ಟೀಂ ಮೈಸೂರು ತಂಡದ ಈ ಪ್ರತಿಭಾ ಕಾರ್ಯಕ್ರಮವನ್ನು ಶ್ಲಾಘಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆಗೆ ಕೆಲವೇ ತಿಂಗಳು ಉಳಿದಿರುವ ಸಂದರ್ಭದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೋಧನೆ ನೀಡುವ ಕಾರ್ಯಕ್ರಮವನ್ನು ಆಯೋಜಿಸಬೇಕೆಂಬ ಸಲಹೆಯನ್ನು ಅದಕ್ಕೆ ಬೇಕಾದ ಸಹಕಾರವನ್ನು ತಾವು ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿರಣ್ ಜೈ ರಾಮೇಗೌಡ, ಹಿರಿಯಣ್ಣ , ಅನಿಲ್ ಜೈನ್, ಮುರಳಿ, ರಾಮಪ್ರಸಾದ್, ದಾಮೋದರ್, ಮನೋಹರ, ಹರೀಶ್ ಶೆಟ್ಟಿ, ಸುನಿಲ್,ಗಣೇಶ್, ಪ್ರಸನ್ನ ರಾಜ್ ಗುರು, ನವೀನ್ ಶೆಟ್ಟಿ, ರಾಘವೇಂದ್ರ ಸಿ.ಎಸ್ , ಸಚಿನ್, ಕೃಷ್ಣ, ನವೀನ್, ಹರೀಶ್ ಎಲೆಕ್ಟ್ರಿಕಲ್, ತಿಲಕ್, ಮನೋಜ್ ಶ್ರೀಮತಿ ಸಹನಾ, ಶ್ರೀಮತಿ ಶಾಂತಕುಮಾರಿ, ಶ್ರೀಮತಿ ಸುಧಾ ಗೌರವಮುರಳಿ, ಶ್ರೀಮತಿ ಮಂಜುಳಾ, ಶ್ರೀಮತಿ ಉಮಾ ಹಿರಿಯಣ್ಣ,ಶ್ರೀಮತಿ ಜ್ಯೋತಿ ರಾಮ ಪ್ರಸಾದ್, ಶ್ರೀಮತಿ ಪೂಜೆಶ್ರೀ, ಕು. ಸುಕೃತ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ತಂಡದ ಸದಸ್ಯರಾದ ಹೇಮಂತ್ ಕುಮಾರ ಅವರು ನೆರವೇರಿಸಿದರು.
ಟೀಂ ಮೈಸೂರು ತಂಡದ ಸದಸ್ಯರಾದ ಹರೀಶ್ ವಿ ಶೆಟ್ಟಿ ಅವರು ಸ್ವಾಗತಿಸಿದರು.