ತುಮಕೂರು: ಯುವತಿಗೆ ಹತ್ತು ಸಾವಿರ ರೂ. ನೀಡುತ್ತೇನೆ, ಬಾ ಎಂದು ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಖಾಸಗಿ ಕಾಲೇಜು ಪ್ರಿನ್ಸಿಪಾಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಯೋಗೇಶ್, ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುತ್ತಿದ್ದ. ಹಿಂದೆ 2019ರಲ್ಲಿ ತುಮಕೂರು ಬಾರ್ ಲೈನ್ ರಸ್ತೆಯಲ್ಲಿನ ಇನ್ನೊಂದು ಖಾಸಗಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ, ವಿದ್ಯಾರ್ಥಿನಿಯೊಬ್ಬಳ ದೂರವಾಣಿ ಸಂಖ್ಯೆ ಪಡೆದು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿ ನಂತರ ಕಾಲೇಜು ಬಿಟ್ಟರೂ, ಆರೋಪಿ ಸಂದೇಶ ಕಳುಹಿಸುತ್ತಿದ್ದನ್ನು ನಿಲ್ಲಿಸಿರಲಿಲ್ಲ. ಅದು ತೀವ್ರವಾಗುತ್ತ, ಯುವತಿ ಅವನ ನಂಬರ್ ಬ್ಲಾಕ್ ಮಾಡಿದ್ದಳು. ಒಂದು ವರ್ಷ ಶಾಂತವಾಗಿದ್ದ ಯೋಗೇಶ್, ಜುಲೈ 22ರಂದು ಯುವತಿಯನ್ನು ರಸ್ತೆ ಮೇಲೆಯೇ ಕಾಣುತ್ತಿದ್ದಂತೆ ಮತ್ತೊಂದು ನಂಬರ್‌ನಿಂದ ತಲುಪಿದ್ದಾನೆ. ಈ ಬಾರಿ “ನನಗೆ ನೀನು ಬೇಕು, ಹತ್ತು ಸಾವಿರ ಕೊಡ್ತೀನಿ” ಎಂದು ಸಂದೇಶ ಕಳುಹಿಸಿ ಮತ್ತೆ ಕಿರುಕುಳ ನೀಡಲು ಮುಂದಾಗಿದ್ದ.
ಘಟನೆಗೆ ಮನನೊಂದು ಯುವತಿ ಈ ಮಾಹಿತಿಯನ್ನು ತನ್ನ ತಂದೆಗೆ ಹೇಳಿದ್ದಳು. ತಕ್ಷಣವೇ ತುಮಕೂರು ಮಹಿಳಾ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪೊಲೀಸರು ತ್ವರಿತ ಕ್ರಮ ಕೈಗೊಂಡು ಯೋಗೇಶ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143