ಯಮಕನಮರಡಿ: ಗುಟಗುದ್ದಿ ಗ್ರಾಮ ಕಡೆಯಿಂದ ಶಹಾಬಂದರ ಗ್ರಾಮದ ಕಡೆ ಅತಿ ವೇಗವಾಗಿ ಟ್ಯಾಕ್ಟರ ಕೆಎ-49-ಟಿಎ-0308 ಈ ನಂಬರಿನ ಟ್ರ್ಯಾಕ್ಟರ್ ವೇಗ ಮತ್ತು ನಿಷ್ಕಾಳಜೀತನದಿಂದ ಚಲಾಯಿಸುತ್ತಾ ಬಂದ ಚಾಲಕ ವೇಗವನ್ನು ಕಂಟ್ರೋಲ ಮಾಡದೆ ರಸ್ತೆಯ ಪಕ್ಕದಲ್ಲಿ
ಹುಕ್ಕೇರಿ ತಾಲೂಕಿನ ಚಿಕ್ಕಲದಿನ್ನಿ ಗ್ರಾಮದ ಚಂದ್ರಕಾಂತ ಸಣ್ಣತಮ್ಮ ಪಾಟೀಲ( 47 )ರಸ್ತೆಯ ಪಕ್ಕದಲ್ಲಿ ನಿಂತ ಪದಚಾರಿಗೆ ಡಿಕ್ಕಿ ಹೊಡೆದು ಆತ ಸ್ಥಳದಲ್ಲಿ ಮತಪಟ್ಟಿದ್ದಾನೆ ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದ ಹತ್ತಿರ ಸೋಮವಾರ ಜರುಗಿದೆ.
ಟ್ರಾಕ್ಟರ್ ಚಾಲಕ ವಿಠ್ಠಲ ಬಾಳಪ್ಪ ವಟವಟೆ ಸ್ಥಳದಲ್ಲಿ ಟ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ ಈ ಘಟನೆ ಯಮಕನಮರದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.