ಭಾರತ ದೇಶದಲ್ಲಿ, ಸ್ವಾತಂತ್ರ್ಯ ಪ್ರೇಮ, ದೇಶಾಭಿಮಾನ, ರಾಷ್ಟಿçಯ ಭಾವೈಕ್ಯತೆಯ ಜೊತೆಗೆ ಈಗಿನ ಯುವಕ ಯುವತಿಯರು ಪರಿಪೂರ್ಣ ಜ್ಞಾನ ಸಂಪಾದಿಸಿಕೊAಡು ವೈಯಕ್ತಿಕ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದೊಂದು ದಿನ ಭಾರತ ಅರ್ಥಿಕವಾಗಿ ಸಮೃದ್ಧಿ ಹಾಗೂ ಬಲಾಢ್ಯ ಹೊಂದಿದ ಸಂಪದ್ಭರಿತ ದೇಶವಾಗಬೇಕು ಎಂದು ಪರಮಪೂಜ್ಯಶ್ರೀ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಕರೆಕೊಟ್ಟರು.
ಬೆಳಗಾವಿಯ ಶಿವಬಸವ ನಗರದಲ್ಲಿರುವ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ೭೮ನೆಯ ಸ್ವಾತಂತ್ರೊತ್ಸವ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಮೇಲಿನಂತೆ ಆಶೀರ್ವದಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಕೆ.ಬಿಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಲ್ಲ ಅಂಗಸಂಸ್ಥೆಗಳ ಮುಖ್ಯಸ್ಥರ ಹಾಗೂ ಸಿಬ್ಬಂದಿಯವರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭದಲ್ಲಿ ಎಸ್.ಎಸ್.ಸಂಯುಕ್ತ ಪ.ಪೂ.ಕಾಲೇಜಿನ ಉಪನ್ಯಾಸಕರಾದ ಶ್ರೀ ಎ.ಕೆ.ಪಾಟೀಲ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎನ್.ಸಿ.ಸಿ. ಸೇವಾದಳ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕವಾದ ಪಥಸಂಚಲನ ನಡೆಯಿತು. ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಪಿ.ಡಿ.ಶಿವನಾಯ್ಕರ ಇವರು ವೇದಿಕೆಯ ಮೇಲಿದ್ದ ಎಲ್ಲ ಅಂಗಸಂಸ್ಥೆಯ ಮುಖ್ಯಸ್ಥರಿಗೆ ಪುಷ್ಪಾರ್ಪಣೆ ಮಾಡಿದರು. ಉಪಪ್ರಾಚಾರ್ಯರಾದ ಶ್ರೀಮತಿ ಎಸ್.ಬಿ.ಪೂಜಾರ ಇವರು ಕಾರ್ಯಕ್ರಮ ನಿರೂಪಣೆ ಹಾಗೂ ಸಹಶಿಕ್ಷಕರಾದ ಶ್ರೀ ಎಂ.ಬಿ.ಉಳ್ಳೇಗಡ್ಡಿ ವಂದನಾರ್ಪಣೆ ಮಾಡಿದರು.