Live Stream

[ytplayer id=’22727′]

| Latest Version 8.0.1 |

Local NewsState News

ಕನ್ನಡ ಸಾಹಿತ್ಯ ಪರಿಷತ್‌ ಮೇಲೆ ಅವ್ಯವಹಾರದ ಆರೋಪ: ಸರ್ಕಾರದಿಂದ ತನಿಖೆಗೆ ಆದೇಶ

ಕನ್ನಡ ಸಾಹಿತ್ಯ ಪರಿಷತ್‌ ಮೇಲೆ ಅವ್ಯವಹಾರದ ಆರೋಪ: ಸರ್ಕಾರದಿಂದ ತನಿಖೆಗೆ ಆದೇಶ

 

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಮತ್ತು ಅಧಿಕಾರ ದುರ್ಬಳಕೆಯ ಕುರಿತು ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಪಿ. ಶಶಿಧರ್ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ.

ಪರಿಷತ್ತಿನ ವಿವಿಧ ಚಟುವಟಿಕೆಗಳ ಬಗ್ಗೆ ಹಲವಾರು ದೂರುಗಳು ದಾಖಲಾಗಿದ್ದು, ಇದರ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಕಲಂ 25 ಅಡಿಯಲ್ಲಿ 17 ಅಂಶಗಳ ವಿಚಾರಣೆ ನಡೆಯಲಿದೆ. ವಿಚಾರಣಾಧಿಕಾರಿಯು 45 ದಿನಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ತನಿಖೆಗೆ ಒಳಪಟ್ಟ ಪ್ರಮುಖ ಆರೋಪಗಳು:

  • ಪರಿಷತ್ತಿನ ನಿಧಿಯನ್ನು ಅಧ್ಯಕ್ಷರ ಕುಟುಂಬದ ಕಾರ್ಯಕ್ರಮಗಳಿಗೆ ದುರುಪಯೋಗ ಮಾಡಲಾಗಿದೆ ಎನ್ನುವ ಆರೋಪ.
  • 2022-23ನೇ ಸಾಲಿನಿಂದ ಅನುದಾನಗಳ ದುರುಪಯೋಗ, ಸರಕಾರ ಹಾಗೂ ಇತರೆ ಮೂಲಗಳಿಂದ ಬಂದ ಅನುದಾನವನ್ನು ಪಾರದರ್ಶಕವಾಗಿ ನಿರ್ವಹಿಸದೆ ಖರ್ಚು ಮಾಡಿರುವುದು.
  • ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ಹಾವೇರಿ, ಮಂಡ್ಯ) ಖರ್ಚು ವಿವರಗಳನ್ನು ಸಲ್ಲಿಸದೆ ಹಣ ದುರುಪಯೋಗವಾಗಿದೆ.
  • ವಾಹನಗಳ ಖರೀದಿ ಮತ್ತು ಮಾರಾಟದಲ್ಲಿ ಹಣಕಾಸು ದುರುಪಯೋಗ.
  • ಪರಿಷತ್ತಿನ ಕಟ್ಟಡ ನಿರ್ಮಾಣ ಹಾಗೂ ನವೀಕರಣದಲ್ಲಿ ಹಣ ದುರ್ಬಳಕೆ ನಡೆದಿದೆ.
  • ವಿದೇಶ ಪ್ರವಾಸ ಖರ್ಚು ನಿಯಮಬಾಹಿರವಾಗಿದೆ ಎನ್ನಲಾಗಿದೆ.
  • ಕಂಪ್ಯೂಟರ್, ಸಿಸಿಟಿವಿ, ಅಗ್ನಿಶಾಮಕ ಉಪಕರಣಗಳ ಖರೀದಿ, ಪುಸ್ತಕ ಮುದ್ರಣಗಳಲ್ಲಿ ದುರುಪಯೋಗ.
  • ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಅನುದಾನ ಹಂಚಿಕೆಗಳಲ್ಲಿ ಅಕ್ರಮ.
  • ಸಂಘದ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್) ನೀಡುವಲ್ಲಿ ಹಣ ದುರುಪಯೋಗ.
  • ಸಿಎಸ್‌ಆರ್ ನಿಧಿ ದುರುಪಯೋಗ.
  • ವಾರ್ಷಿಕ ಸರ್ವಸದಸ್ಯರ ಸಭೆ ನಡೆಸದಿರುವುದು ಹಾಗೂ ಸಂಬಂಧಿತ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸದೇ ಇರುವುದೂ ತನಿಖೆಗೆ ಒಳಪಟ್ಟಿದೆ.

ಸಹಕಾರ ಇಲಾಖೆಯ ಈ ಕ್ರಮದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದುರಾಗಿವೆ. ತನಿಖಾ ವರದಿಯ ಫಲಿತಾಂಶವು ಮುಂದಿನ ಆಡಳಿತ ಕ್ರಮಗಳ ನಿರ್ಧಾರಕ್ಕೆ ಪ್ರಮುಖ ಆದಾರವಾಗಲಿದೆ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಅಥವಾ ಜಾಹೀರಾತಿಗಾಗಿ ಸಂಪರ್ಕಿಸಿ:
+91 91645 77143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";